ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಇ ದಿಢೀರ್ ಕುಸಿತ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಧಿಡೀರನೆ 900 ಅಂಶಗಳಷ್ಟು ಕುಸಿತ ಕಂಡು ಹೂಡಿಕೆದಾರರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತು. ಇದರಿಂದ 15 ನಿಮಿಷಗಳ ಕಾಲ `ಎನ್‌ಎಸ್‌ಇ~ ವಹಿವಾಟು ಸ್ಥಗಿತಗೊಂಡಿತು.  ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ರೂ10 ಲಕ್ಷ ಕೋಟಿಗಳಷ್ಟು ಕರಗಿ ಹೋಯಿತು.

`ಎಂಕೆ ಗ್ಲೋಬಲ್~ ಎನ್ನುವ ಷೇರು ದಲ್ಲಾಳಿ ಸಂಸ್ಥೆ ನಡೆಸಿದ `ನಕಲಿ~ ವಹಿವಾಟಿನಿಂದ ಬ್ಯಾಂಕಿಂಗ್ ಸೇರಿದಂತೆ ಹಲವು ಕಂಪೆನಿಗಳ ಷೇರುಗಳ ದರ ಕ್ಷಣಮಾತ್ರದಲ್ಲಿ ಪಾತಾಳಕ್ಕೆ ಕುಸಿಯಿತು. ಈ ಕಂಪೆನಿ ರೂ650 ಕೋಟಿ ಮೊತ್ತದ ದೋಷಪೂರಿತ ವಹಿವಾಟು ದಾಖಲಿಸಿದ್ದೇ ಅನಿರೀಕ್ಷಿತ ಕುಸಿತಕ್ಕೆ ಕಾರಣವಾಯಿತು.

ಭಾರತೀಯ ಷೇರುಪೇಟೆ ನಿಯಂತ್ರಣ ಪ್ರಾಧಿಕಾರ (ಸೆಬಿ) ಈ ಕುರಿತು ಪ್ರಾಥಮಿಕ ತನಿಖೆಗೆ ಆದೇಶ ನೀಡಿದ್ದು, ಮುಂದೆ ಇಂತಹ ದಿಢೀರ್ ಕುಸಿತ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಷೇರು ವಹಿವಾಟಿನಲ್ಲಿ ಯಾವುದೇ ತಾಂತ್ರಿಕ ಅಡಚಣೆ ಇಲ್ಲ ಎಂದು `ಎನ್‌ಎಸ್‌ಇ~ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ಕೆಲವು ಮಹತ್ವದ ಆರ್ಥಿಕ ಸುಧಾರಣೆಗಳನ್ನು ಪ್ರಕಟಿಸಿರುವುದರಿಂದ ಸೂಚ್ಯಂಕ ಏರಿಕೆ ಕಾಣಬಹುದು ಎನ್ನುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದರು. ಆದರೆ, ಈ ದಿಢೀರ್ ಕುಸಿತದಿಂದ ಇಡೀ ಷೇರುಪೇಟೆ  ಕೆಲಕಾಲ ತತ್ತರಿಸಿತು.

ತಾಂತ್ರಿಕ ಸುಧಾರಣೆ
ಇತ್ತೀಚೆಗೆ `ಎನ್‌ಎಸ್‌ಇ~ ವಹಿವಾಟಿನಲ್ಲಿ ಹಲವು ತಾಂತ್ರಿಕ ಸುಧಾರಣೆಗಳನ್ನು ಮಾಡಲಾಗಿದ್ದು, ಇದರಿಂದ ಷೇರು ದರಗಳನ್ನು ಕ್ಷಣಮಾತ್ರದಲ್ಲಿ ಬದಲಿಸಬಹುದಾಗಿದೆ. ದಲ್ಲಾಳಿ ಸಂಸ್ಥೆಗಳು ಇದರ ದುರುಪಯೋಗ ಪಡೆಯುತ್ತಿರುವುದರಿಂದ ಈ ಸುಧಾರಿತ ತಂತ್ರಜ್ಞಾನವೇ ಮುಳುವಾಗಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT