ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐ ಒಳಹರಿವಿನಲ್ಲಿ ಶೇ.43ರಷ್ಟು ಕುಸಿತ

Last Updated 27 ಫೆಬ್ರುವರಿ 2013, 10:21 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಭಾರತಕ್ಕೆ ಹರಿದು ಬರುವ ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಒಳ ಹರಿವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ - ನವೆಂಬರ್ ಮಧ್ಯದ ಅವಧಿಯಲ್ಲಿ 15.85 ಶತಕೋಟಿ ಅಮೆರಿಕನ್ ಡಾಲರ್‌ಗೆ ಇಳಿದಿದ್ದು ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ಇದು ಶೇ.43.3 ರಷ್ಟು ಇಳಿಕೆ ಕಂಡಿದೆ ಎಂಬ ಅಂಶ ಬುಧವಾರ ಬಿಡುಗಡೆಗೊಳಿಸಲಾದ 2012-13ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿಯಿಂದ ತಿಳಿದು ಬಂದಿದೆ.

2013 -14ನೇ ಸಾಲಿನ ಕೇಂದ್ರ ಬಜೆಟ್ ಮುನ್ನಾ ದಿನವಾದ ಬುಧವಾರ ಸಂಸತ್ತಿನಲ್ಲಿ ವಾರ್ಷಿಕ ವರದಿಯನ್ನು ಮಂಡಿಸಿ  ಮಾತನಾಡಿದ ಚಿದಂಬರಂ ಅವರು ಪ್ರಮುಖ ಐದು ಸೇವೆಗಳಲ್ಲಿ ಎಫ್‌ಡಿಐ 8.19 ಶತಕೋಟಿ ಇಳಿಯುವ ಮೂಲಕ ಶೇ.9.7 ರಷ್ಟು ಕುಸಿತ ಕಂಡಿದೆ ಎಂದು ಹೇಳಿದರು.

`ಸಾರ್ವಜನಿಕ ಸೇವಾ ವಲಯಗಳಲ್ಲಿ ಎಫ್‌ಡಿಐ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳಲಿದ್ದು,  ಸದ್ಯ ಅಸ್ತಿತ್ವದಲ್ಲಿರುವ ಸಿಂಗಲ್ ಬ್ರಾಂಡ್ ಉತ್ಪಾದನೆಯ ಚಿಲ್ಲರೆ ಮಾರಾಟದಲ್ಲಿನ ಎಫ್‌ಡಿಐ ನೀತಿಯನ್ನು ಸಹ ಸರ್ಕಾರ ತಿದ್ದುಪಡಿ ಮಾಡಲಿದೆ' ಎಂದು ಅವರು ತಿಳಿಸಿದರು.

2011 -12 ರ ಸಾಲಿನಲ್ಲಿ ಒಟ್ಟಾರೆ ಎಫ್‌ಡಿಐ ಒಳಹರಿವು ಶೇ.33.6 ರಷ್ಟು ಏರಿಕೆ ಕಂಡಿತ್ತು. ಅಲ್ಲದೇ, 2012ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸೇವಾ ವಲಯಗಳಲ್ಲಿ ಎಫ್‌ಡಿಐ ಹರಿವು ಶೇ.57.62ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT