ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿವಿಪಿಯಿಂದ ಮಾನವ ಸರಪಳಿ,ರಸ್ತೆ ತಡೆ

Last Updated 21 ಡಿಸೆಂಬರ್ 2013, 9:18 IST
ಅಕ್ಷರ ಗಾತ್ರ

ಹಾವೇರಿ: ಸಿಇಟಿ ಸೀಟು ಹಾಗೂ ಶುಲ್ಕ ನಿಗದಿ ಕುರಿತ 2006ರ ಕಾಯ್ದೆ ಜಾರಿ ಕುರಿತು ಉನ್ನತ ಶಿಕ್ಷಣ ಸಚಿವರ ಬೇಜವ­ಬ್ದಾರಿ ಹೇಳಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳ ಜೀವನದ ಜತೆ ಮುಖ್ಯಮಂತ್ರಿಗಳ ಹಾಗೂ ಉನ್ನತ ಶಿಕ್ಷಣ ಸಚಿವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋ­ಪಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಆರ್‌.ವಿ.ದೇಶಪಾಂಡೆ ಅವರ ಭಾವಚಿತ್ರ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಹೊಸಮಠ ಕಾಲೇಜಿನಿಂದ ಪ್ರತಿಭಟನಾ ಮೆರ­ವಣಿಗೆ ಆರಂಭಿಸಿದ ಎಬಿವಿಪಿ ಕಾರ್ಯಕರ್ತರು ಹಾಗೂ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಗರದ ಪ್ರಮುಖ ಬೀದಿ­ಗಳಲ್ಲಿ ಸಂಚರಿಸಿ ಸಿದ್ದಪ್ಪ ವೃತ್ತದಲ್ಲಿ ಗಂಟೆಗೂ ಹೆಚ್ಚು ಕಾಲ ಮಾನವ ಸರಪಳಿ ರಚಿಸಿ, ಟಯರ್‌ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ­ದರು.

ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ, ೨೦೦೬ರ ವೃತ್ತಿ ಶಿಕ್ಷಣ ಕಾಯ್ದೆ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ ಎಂಬದನ್ನು ಅಂಕಿ ಅಂಶಗಳ ಸಮೇತ ತಿಳಿಸಿದರೂ, ಉನ್ನತ ಶಿಕ್ಷಣ ಸಚಿವರು ಅದ್ಯಾವುದನ್ನು ಲೆಕ್ಕಿಸದೇ ಕಾಯ್ದೆಯನ್ನು ಜಾರಿ­ಗೊಳಿ­ಸುವುದಾಗಿ ತಿಳಿಸಿದ್ದಾರೆ. ಇಂತಹ ಬೇಜವಾಬ್ದಾರಿ ಸಚಿವರಿಂದ ಶಿಕ್ಷಣ ಕ್ಷೇತ್ರ ಸಂಪೂರ್ಣ ವ್ಯಾಪಾರೀಕರಣವಾಗಲಿದೆ ಎಂದು ಆರೋಪಿಸಿದರು.

ಅದು ಅಲ್ಲದೇ ಸಚಿವ ಆರ್.ವಿ. ದೇಶಪಾಂಡೆ ಹೊಸ ಸಿಇಟಿ ಕಾಯ್ದೆಯಿಂದ ತಾಂತ್ರಿಕ ಶಿಕ್ಷಣದ ಪ್ರವೇಶ ಶುಲ್ಕ ಹೆಚ್ಚಬಹುದು. ಆದರೆ, ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಬದ್ಧ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶುಲ್ಕ ಹೆಚ್ಚಿಸುವ ಖಾಸಗಿ ಸಂಸ್ಥೆಗಳಿಗೆ ಬೆಂಬಲ ನೀಡಿದ್ದಾರೆ ಎಂದು ಆಪಾದಿಸಿದರು.

ನಂತರ ಪ್ರತಿಭಟನಾಕಾರರು 006 ರ ವೃತ್ತಿ ಶಿಕ್ಷಣ ಕಾಯ್ದೆ ಜಾರಿಗೆ ತರಬಾರದು, ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕು. ಶೇ.೫೦ ಸೀಟುಗಳಿಗೆ ಈಗಿ­ರುವಂತೆ ಸರ್ಕಾರದ ಶುಲ್ಕವನ್ನು ಮುಂದುವರಿಸಬೇಕು. ಉಳಿದ ಶೇ.೫೦ ಸೀಟುಗಳಿಗೆ ಮ್ಯಾನೇಜ್‌ಮೆಂಟ್‌ಗಳೊಂದಿಗೆ ಚರ್ಚಿಸಿ ಶುಲ್ಕ ನಿರ್ಧರಿಸಬೇಕು. ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ ವೃತ್ತಿಶಿಕ್ಷಣದ ತೀರ್ಪನ್ನು ಜಾರಿಗೊಳಿಸಬಾರದು ಎಂಬ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಪ್ರತಿಭಟಣೆಯಲ್ಲಿ ಎಬಿವಿಪಿ ಕಾರ್ಯಕರ್ತರಾದ ಶಿಲ್ಪಾ ತಟ್ಟಪಟ್ಟಿ, ಹರಿಪ್ರೀಯಾ ಇನಾಮದಾರ, ಜ್ಯೋತಿ ಶಿರಗುಪ್ಪಿ, ರಂಜನಾ ಆಲದಕಟ್ಟಿ, ಶಶಿಕಲಾ ಗಿರಣ್ಣನವರ, ಐಶ್ವರ್ಯ. ಎ., ನಾಗರಾಜ ಹುರಳಿಕುಪ್ಪಿ, ಪವನ ತಳವಾರ. ಗಣೇಶ ಕರೂರ, ವಿಶ್ವನಾಥ ದೊಡ್ಡಮನಿ, ಪ್ರಶಾಂತ ಮಾಳಗಿ, ಮಹೇಶ ಆಚಾರ್ಯ, ಕಿರಣ ಕೋಣನವರ ಹಾಗೂ ವಿವಿಧ ಕಾಲೇಜು­ಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT