ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸುತ್ತಿಗೆ ಸೈನಾ

Last Updated 10 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್ (ಪಿಟಿಐ):  ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ 21-13, 21-16ರಲ್ಲಿ ಕೊರಿಯಾದ ಸ್ಯೂಂಗ್ ಹೀ ಬೇ ಅವರನ್ನು ಪರಾಭವಗೊಳಿಸಿದರು.

ಐದನೇ ಶ್ರೇಯಾಂಕ ಪಡೆದಿರುವ ಸೈನಾ ಈ ಗೆಲುವಿಗಾಗಿ 34 ನಿಮಿಷ ತೆಗೆದುಕೊಂಡರು. ಆದರೆ ಸಾಕಷ್ಟು ಪೈಪೋಟಿಯನ್ನು ಅವರು ಎದುರಿಸಬೇಕಾಯಿತು.
‘ಆರಂಭದಲ್ಲಿ ನಾನು ತುಂಬಾ ತಪ್ಪು ಮಾಡಿದೆ. ಪಂದ್ಯದ ಮೇಲೆ ಹಿಡಿತ ಸಾಧಿಸಲು ವಿಫಲನಾದೆ’ ಎಂದು 21 ವರ್ಷ ವಯಸ್ಸಿನ ನೆಹ್ವಾಲ್ ಪಂದ್ಯದ ಬಳಿಕ ನುಡಿದರು.
‘ಆದರೆ ಎರಡನೇ ಗೇಮ್‌ನಲ್ಲಿ ಪಂದ್ಯದ ಮೇಲೆ ಹಿಡಿತ ಕಂಡುಕೊಂಡೆ. ಬೇಗ ಮುನ್ನಡೆ ಕೂಡ ಪಡೆದೆ. ಬಳಿಕ ಎದುರಾಳಿ ಆಟಗಾರ್ತಿ ಉತ್ತಮ ಪ್ರದರ್ಶನ ತೋರಿದರು. ಕೊನೆಯಲ್ಲಿ ನನ್ನ ಸ್ಮ್ಯಾಷ್‌ಗಳು ನೆರವಿಗೆ ಬಂದವು’ ಎಂದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ ಚೈನಿಸ್ ತೈಪೆಯ ಜು ಯಿಂಗ್ ತೈ ಅವರನ್ನು ಎದುರಿಸಲಿದ್ದಾರೆ.ಟೈನ್ ಬವುನ್ ಹಾಗೂ ಯಿಹಾನ್ ವಾಂಗ್ ಅವರು ಟೂರ್ನಿಯಿಂದ ಹಿಂದೆ ಸರಿದ ಕಾರಣ ಸೈನಾ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದಾರೆ.‘ನಾನೀಗ ಕೊಂಚ ನರ್ವಸ್ ಆಗಿದ್ದೇನೆ. ಮುಂದಿನ ಸುತ್ತಿನಲ್ಲಿ ಕೂಡ ಕಠಿಣ ಎದುರಾಳಿ ಸಿಕ್ಕಿದ್ದಾರೆ. ಯಾರನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ’ ಎಂದು ಅವರು ವಿವರಿಸಿದ್ದಾರೆ.

ಜ್ವಾಲಾ-ಅಶ್ವಿನಿಗೆ ಜಯ: ಇದೇ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.ಗುಟ್ಟಾ ಹಾಗೂ ಪೊನ್ನಪ್ಪ 21-11, 21-18ರಲ್ಲಿ ಡೆನ್ಮಾರ್ಕ್‌ನ ಮರಿಯಾ ಹೆಲ್ಸ್‌ಬೊಲ್ ಹಾಗೂ ಆ್ಯನ್ ಸ್ಕೆಲ್ಬೆಕ್ ಅವರನ್ನು ಸೋಲಿಸಿದರು.ಆದರೆ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆನಂದ್ ಪವಾರ್ 16-21, 18-21ರಲ್ಲಿ ಥಾಯ್ಲೆಂಡ್‌ನ ತನೊಂಗ್‌ಸ್ಯಾಕ್ ಸೇನ್ ಎದುರು ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT