ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಹೊಸ ಬಸ್‌ಗಳಿಗೆ ಚಾಲನೆ

Last Updated 29 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ನೂತನ ಬಸ್ ಸೇವೆಗಳಿಗೆ ಸಾರಿಗೆ ಸಚಿವ ಆರ್. ಅಶೋಕ ಗುರುವಾರ ಚಾಲನೆ ನೀಡಿದರು. `ಐರಾವತ ಕ್ಲಬ್ ಕ್ಲಾಸ್~ ಮತ್ತು `ಕರ್ನಾಟಕ ವೈಭವ~ ಎಂಬ ಹೆಸರಿನ ಈ ನೂತನ ಬಸ್ ಸೇವೆಗಳು ಅಕ್ಟೋಬರ್ ಒಂದರಿಂದ ಜನತೆಗೆ ಲಭ್ಯವಾಗಲಿವೆ.
 

ಕರ್ನಾಟಕ ವೈಭವ ಬಸ್ ವೇಳಾಪಟ್ಟಿ
ಮಾರ್ಗ ಹೊರಡುವ ಸಮಯ ದರ (ರೂ.)ಬೆಂಗಳೂರು-ತಿರುಪತಿ ರಾ.10.40, ಬೆ. 11.15 ಹಗಲು 190

ತಿರುಪತಿ-ಬೆಂಗಳೂರು ಬೆ.8, ರಾ. 10.45 ರಾತ್ರಿ 210ಬೆಂಗಳೂರು-ವೆಲ್ಲೂರು ರಾ.10.45, ಮ. 3.30 ಹಗಲು 160

ವೆಲ್ಲೂರು-ಬೆಂಗಳೂರು ಬೆ. 7.30, ರಾ. 11.15 ರಾತ್ರಿ 180ಬೆಂಗಳೂರು-ಕಾಂಚೀಪುರಂ ರಾ. 10.10 ಹಗಲು 180
ಕಾಂಚೀಪುರಂ-ಬೆಂಗಳೂರು ಬೆ.

7.15 ರಾತ್ರಿ 200ಬೆಂಗಳೂರು-ಧರ್ಮಸ್ಥಳ ರಾ. 9.45 ಹಗಲು 250
ಧರ್ಮಸ್ಥಳ-ಬೆಂಗಳೂರು ಬೆ. 11.15 ರಾತ್ರಿ 270ಬೆಂಗಳೂರು-ಕುಕ್ಕೆಸುಬ್ರಹ್ಮಣ್ಯ ಬೆ. 8.30 ಹಗಲು 250

ಕುಕ್ಕೆಸುಬ್ರಹ್ಮಣ್ಯ-ಬೆಂಗಳೂರು ರಾ. 10 ರಾತ್ರಿ 270ರಾರಾತ್ರಿ, ಬೆಬೆಳಿಗ್ಗೆ, ಮಮಧ್ಯಾಹ್ನ
 


ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳನ್ನು ಮರ್ಸಿಡಿಸ್ ಬೆಂಜ್ ಕಂಪೆನಿಯಿಂದ ಖರೀದಿಸಲಾಗಿದ್ದು, ಈ ಬಸ್ಸಿನ ಚಾಲಕರಿಗೆ ಪುಣೆಯಲ್ಲಿರುವ ಬೆಂಜ್ ಕಂಪೆನಿಯ ಘಟಕದಲ್ಲಿ ತರಬೇತಿ ನೀಡಲಾಗಿದೆ. `ಕರ್ನಾಟಕ ವೈಭವ~ ಬಸ್ಸುಗಳನ್ನು ಬಡವರಿಗೂ ಕಡಿಮೆ ಬೆಲೆಯಲ್ಲಿ ಸುಖಾಸೀನ ಪ್ರಯಾಣ ಲಭ್ಯವಾಗಬೇಕು ಎಂದು ಆಶಯದಿಂದ ಆರಂಭಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಮೈಸೂರಿನಲ್ಲಿ ಆರಂಭಿಸಲಾದ `ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್~ ವ್ಯವಸ್ಥೆ ದೇಶದಲ್ಲೇ ಮೊದಲನೆಯದು. ಇದಕ್ಕೆ ವಿಶ್ವ ಬ್ಯಾಂಕ್‌ನಿಂದ 9 ಕೋಟಿ ರೂಪಾಯಿ ಮತ್ತು ಕೇಂದ್ರ ಸರ್ಕಾರದಿಂದ ಜೆ-ನರ್ಮ್ ಯೋಜನೆಯಡಿ 13 ಕೋಟಿ ರೂಪಾಯಿ ಸಹಾಯಧನ ದೊರೆತಿದೆ ಎಂದು ಹೇಳಿದರು.

`ಯೂರೊ-4~ ಮಾದರಿಯ ಬಸ್‌ಗಳನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನ ನಾಗರಿಕರ ಸೇವೆಗೆ ಒದಗಿಸಲಾಗುವುದು ಎಂದರು.

ರಾಜ್ಯದ ಎಲ್ಲ ಬಸ್ ನಿಲ್ದಾಣ ಗಳಲ್ಲೂ ವಿಮಾನ ನಿಲ್ದಾಣಗಳಲ್ಲಿ ಸಿಗುವಂತಹ ಸೇವೆ, ಸೌಲಭ್ಯ ದೊರೆಯುವಂತೆ ಮಾಡಲಾ ಗುವುದು ಎಂದು ಅಶೋಕ ಅವರು ತಿಳಿಸಿದರು.

ಐರಾವತ ಕ್ಲಬ್ ಕ್ಲಾಸ್
: ಆರಂಭದಲ್ಲಿ ಐರಾವತ ಕ್ಲಬ್ ಕ್ಲಾಸ್ ಬಸ್ಸು ಮೂರು ಮಾರ್ಗಗಳಲ್ಲಿ ಸಂಚರಿಸಲಿದೆ.
ಕರ್ನಾಟಕ ವೈಭವ: ಈ ಬಸ್‌ಗಳ ಸಂಚಾರ ಕೂಡ ಅಕ್ಟೋಬರ್ ಒಂದರಿಂದ ಆರಂಭವಾಗಲಿದೆ.
 

ಐರಾವತ ಕ್ಲಬ್ ಕ್ಲಾಸ್ ಬಸ್ ವೇಳಾಪಟ್ಟಿಮಾರ್ಗ ಹೊರಡುವ ವೇಳೆ ದರ (ರೂ.)
ಬೆಂಗಳೂರು-ಹೈದರಾಬಾದ್ ರಾತ್ರಿ 9.10 900ಹೈದರಾಬಾದ್-ಬೆಂಗಳೂರು ಸಂಜೆ 7 900
ಬೆಂಗಳೂರು-ವಿಜಯವಾಡ ರಾತ್ರಿ 8.30 950ವಿಜಯವಾಡ-ಬೆಂಗಳೂರು ರಾತ್ರಿ 8.30 950
ಬೆಂಗಳೂರು-ಎರ್ನಾಕುಲಂ ರಾತ್ರಿ 7.45 850ಎರ್ನಾಕುಲಂ-ಬೆಂಗಳೂರು ಸಂಜೆ 6.30 850


ಆರಂಭದಲ್ಲಿ 14 ಬಸ್‌ಗಳು ಸಂಚಾರ ಆರಂಭಿಸಲಿದ್ದು ಮುಂದಿನ ದಿನಗಳಲ್ಲಿ 50 ಬಸ್‌ಗಳನ್ನು ಖರೀದಿ ಮಾಡಲಾಗುವುದು ಎಂದು ನಿಗಮದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮುಂದಿನ ದಿನಗಳಲ್ಲಿ `ಕರ್ನಾಟಕ ವೈಭವ~ ಬಸ್ ಅನ್ನು ಶ್ರೀಕಾಳಹಸ್ತಿ, ಪಾವಗಡ, ವಿಲ್ಲುಪುರ, ಮಂಗಳೂರು, ತಿರುವಣ್ಣಾಮಲೈ, ಎರ್ನಾಕುಳಂ, ದಾವಣಗೆರೆ, ಹುಬ್ಬಳ್ಳಿ ಮುಂತಾದ ಊರುಗಳಿಗೆ ಆರಂಭಿಸಲಾಗುವುದು ಎಂದು ಪ್ರಕಟಣೆ ವಿವರಿಸಿದೆ.

ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ, ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT