ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಲ್ಲರಿಗೂ ಕಾನೂನು ಅರಿವು ಅಗತ್ಯ'

Last Updated 2 ಏಪ್ರಿಲ್ 2013, 6:08 IST
ಅಕ್ಷರ ಗಾತ್ರ

ರಾಮನಾಥಪುರ: `ಶಾಂತಿಯುತ ಜೀವನಕ್ಕೆ ಕಾನೂನು ತಿಳಿವಳಿಕೆ ಅಗತ್ಯ' ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕಂಬೇಗೌಡ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ವಕಿಲರ ಸಂಘ, ಕಂದಾಯ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಕೊಣನೂರಿನಲ್ಲಿ ಸೋಮವಾರ ಏರ್ಪ ಡಿಸಿದ್ದ ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಾರ್ಷಿಕ ರೂ. 1ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಕಾನೂನು ನೆರವು ಉಚಿತವಾಗಿ ಒದಗಿಸಲಾಗು ವುದು. ಮಧ್ಯಸ್ಥಗಾರರ ಮತ್ತು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸಬೇಕು. ಇದರಿಂದ ಉಭಯ ಪಕ್ಷದವರಿಗೆ ಅನುಕೂಲ ಎಂದು ಹೇಳಿದರು.

ವಕೀಲ ಶಂಕರಯ್ಯ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಸರ್ಕಾರದ ವಿವಿಧ ಇಲಾಖೆಗಳ ಮಾಹಿತಿ ಪಡೆ ಯಲು ಸಹಕಾರಿ. ಇದರಿಂದ  ಬದಲಾವಣೆ ಸಾಧ್ಯ ಎಂದರು.

ವಕೀಲರಾದ ಸೌಮ್ಯ ಮಾತಾನಾಡಿ, ಅತ್ಯಾಚಾರ, ಹಿಂಸೆ, ವರದಕ್ಷಿಣೆ ಕಿರುಕುಳ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ. ದಾರಿ ತಪ್ಪಿಸುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿವೆ ಎಂದು ಹೇಳಿದರು.

ಸಿವಿಲ್ ನ್ಯಾಯಾಧೀಶ ವೆಂಕಟಪ್ಪ ಮಾತನಾಡಿ, ಒಡೆದ ಮನಸು ಒಂದುಗೂಡಿಸುವ ಶಕ್ತಿ ಕಾನೂನಿಗಿದೆ. ಮಹಿಳೆಗೆ ಶೀಘ್ರವಾಗಿ ನ್ಯಾಯ ಒದಗಿಸಬೇಕು ಎಂದರು.

ವಕೀಲ ಬಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ವೆಂಕಟಪ್ಪ, ವಕೀಲ ಸಂಘದ ಅಧ್ಯಕ್ಷ ಬಿ.ರಾಜೇಶ್, ಶಂಕರಯ್ಯ, ಮಮತ, ವೈ.ಎಸ್. ಮಲ್ಲೇಗೌಡ ಸಿ.ಡಿ.ಪಿ.ಒ ಅರಕಲಗೂಡು, ಸಿ.ಪಿ.ಐ. ರಾಜು, ವಕೀಲರಾದ ಕಿತ್ತೂರು ಧರ್ಮಪ್ಪ ಹಾಗು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಸ್ವಸಹಾಯ ಗುಂಪಿನ ಮಹಿಳೆ ಯರು, ಬಾಂಧವ್ಯ ಮಹಿಳಾ ಒಕ್ಕೂಟದ ಸದಸ್ಯರು, ಕೊಣನೂರು ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT