ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಕಾನೂನು ಜ್ಞಾನ ಅವಶ್ಯಕ

Last Updated 14 ಫೆಬ್ರುವರಿ 2012, 8:25 IST
ಅಕ್ಷರ ಗಾತ್ರ

ಧಾರವಾಡ: `ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಯಲ್ಲಿ ಕಾನೂನುಗಳ ಬಗ್ಗೆ ಜ್ಞಾನ ಪಡೆದು ಕೊಂಡರೆ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬಾಳಲು ಸಾಧ್ಯ~ ಎಂದು ಜಿಲ್ಲಾ ನ್ಯಾಯಧೀಶ ಕೆ. ನಟರಾಜನ್ ಹೇಳಿದರು.

ಕಾನೂನು ಸಾಕ್ಷರತಾ ರಥಯಾತ್ರೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇಲ್ಲಿನ ವಿದ್ಯಾ ರಣ್ಯ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಾವೆಲ್ಲರೂ ಕಾನೂನು ಅಡಿಯಲ್ಲಿಯೇ ಕೆಲಸ ಮಾಡಬೇಕಾ ಗಿದೆ. ಪ್ರತಿ ಹೆಜ್ಜೆ ಹಜ್ಜೆಗೂ ಕಾನೂನು ತಿಳಿವಳಿಕೆಗಳು ಬೇಕು ಎಂದು ಅಭಿಪ್ರಾ ಯಪಟ್ಟ ಅವರು, ವಿದ್ಯಾರ್ಥಿಗಳು ತಮ್ಮ ಆರಂಭದ ಹಂತದಿಂದಲೇ ಕಾನೂನು ಅರಿತು ಕೊಂಡರೆ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಯಿದೆ ಕಾನೂನು ಅಧ್ಯಯನ ಮಾಡಬೇಕು  ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈ.ಎಸ್. ರವಿಕುಮಾರ ಮಾತನಾಡುತ್ತಾ, `ಇಂದಿನ ಯುವಜ ನಾಂಗಕ್ಕೆ ಕಾನೂನು ಸಾಕ್ಷರತೆ ಬೇಕು. ಕಾನೂನು ಅಡಿ ಎಲ್ಲರೂ ಒಂದೇ. ನಾವೆಲ್ಲರೂ ಜವಾಬ್ದಾರಿಯಿಂದ ಕಾನೂನು ತಿಳಿದುಕೊಂಡು ವ್ಯವಹರಿ ಸಬೇಕು~ ಎಂದು ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಸಿ.ರಾಜಶೇಖರ ಮಾತನಾಡಿ, ನಾಡಿನ ಜನರಿಗೆ ಕಾನೂನು ಅರಿವು ಮೂಡಿಸಲು ಪ್ರಾಧಿಕಾರ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ.
 
ಪರಿಶಿಷ್ಟ ಜಾತಿ, ಮಹಿಳೆಯರು, ಮಕ್ಕಳು, ಕಾರ್ಮಿಕರು, ಮಾನಸಿಕವಾಗಿ ನೊಂದ ವರು ಹಾಗೂ ವಾರ್ಷಿಕ ವರಮಾನ 1.25 ಲಕ್ಷಗಳಿಗಿಂತ ಕಡಿಮೆ ಆದಾಯ ಇರುವವರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ.

ಕಾನೂನು ನೆರವು ನೀಡಲು ತಹಶೀಲ್ದಾರ ಕಚೇರಿ, ನ್ಯಾಯಾಲಯ ಆವರಣ ಹಾಗೂ ಆರೋಗ್ಯ ಸಂಸ್ಥೆಯಲ್ಲಿ ಕಾನೂನು ನೆರವು ಕೇಂದ್ರಗಳನ್ನು ಆರಂಭಿಸಲಾಗಿದೆ. ಜನತಾ ನ್ಯಾಯಾಲಯ ಮೂಲಕ ರಾಜಿಸಂಧಾನ ಏರ್ಪಡಿಸಿ ಪ್ರಕರಣಗ ಳನ್ನು ಇತ್ಯರ್ಥಪಡಿಸಲಾಗುತ್ತದೆ. ಅಲ್ಲದೇ ಮೆಗಾ ಅದಾಲತ್‌ಗಳನ್ನು ಏರ್ಪಡಿಸಿ ಇದು ವರೆಗೆ 12 ಸಾವಿರ ಪ್ರಕರಣಗಳನ್ನು ಇತ್ಯರ್ಥ ಪಡಿಸಿದೆ ಎಂದರು.

ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಡಾ. ಎಸ್.ಎಂ.ಹೊನಕೇರಿ ಉಪನ್ಯಾಸ ನೀಡಿ, ತಂಬಾಕು ಸೇವನೆಯಿಂದ ಪ್ರತಿದಿನ ದೇಶದಲ್ಲಿ 2200 ಜನರು ಸಾವನ್ನಪ್ಪು ತ್ತಿದ್ದಾರೆ. ವರ್ಷದಲ್ಲಿ ಸುಮಾರು 10 ಲಕ್ಷ ಜನ ಸಾಯುತ್ತಿದ್ದಾರೆ ಎಂದು ಹೇಳಿದರು.

ಸಂಚಾರ ಪೊಲೀಸ್ ಠಾಣೆಯ ಪಿಐ ಎಂ.ಐ.ಮುಪ್ಪಿನಮಠ ಸಂಚಾರ ನಿಯಮಗಳು ಹಾಗೂ ಮೋಟಾರು ವವಾಹನ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. 

ಪ್ರೊ. ಮೋಹನ ಸಿದ್ಧಾಂತಿ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ, ನಾಗೇಶ ಶಾನಭಾಗ, ವಿ.ಸಿ. ಕೋಬಾಳ ಮತ್ತಿತರರು  ವೇದಿಕೆ ಮೇಲೆ ಹಾಜರಿದ್ದರು.

ಈಶ್ವರರಾವ್ ಕಾರಾಟ್ ಸ್ವಾಗತಿ ಸಿದರು. ವಿದ್ಯಾ ಜಮಖಂಡಿ ಕಾರ್ಯ ಕ್ರಮ ನಿರೂಪಿಸಿದರು.ಎನ್. ಎಸ್. ಸಾಲಿಮಠ ವಂದಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT