ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಮಾಜಿ ದೂರಸಂಪರ್ಕ ಸಚಿವರಿಗೆ ಜೆಪಿಸಿ ಸಮನ್ಸ್

Last Updated 3 ಜೂನ್ 2011, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಮುಂದೆ  ದಯಾನಿಧಿ ಮಾರನ್ ಸೇರಿದಂತೆ ಎಲ್ಲಾ ಮಾಜಿ ದೂರಸಂಪರ್ಕ ಸಚಿವರು ಹಾಜರಾಗಬೇಕೆಂದು ಸೂಚಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಪಿ.ಸಿ. ಚಾಕೋ ಶುಕ್ರವಾರ ಹೇಳಿದ್ದಾರೆ.

ಆದರೆ ಮಾರನ್ ಅವರ ವಿರುದ್ಧದ ಇತ್ತೀಚಿನ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು  ಕರೆಸುತ್ತಿಲ್ಲ ಎಂದು ಚಾಕೋ ಸ್ಪಷ್ಟಪಡಿಸಿದ್ದಾರೆ.

`1998ರಿಂದ 2009ರವರೆಗಿನ ಅವಧಿಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ ಪರಿಶೀಲಿಸಬೇಕಿದ್ದು ಈ ಅವಧಿಯಲ್ಲಿ ದೂರಸಂಪರ್ಕ ಸಚಿವರಾಗಿದ್ದವರೆಲ್ಲರನ್ನೂ ಸಮಿತಿ ಮುಂದೆ ಕರೆಸಲಾಗುವುದು.ಸಹಜವಾಗಿಯೇ ಮಾರನ್ ಅವರಿಗೂ ಕರೆ ಕಳು ಹಿಸಲಾಗುವುದು~ ಎಂದು ಅವರು ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಬಿಜೆಪಿ ಒತ್ತಾಯ: ಕೇಂದ್ರ ಜವಳಿ ಸಚಿವ ದಯಾನಿಧಿ ಮಾರನ್ ಅವರು ಇತ್ತೀಚಿನ ಆರೋಪದ ಹಿನ್ನೆಲೆಯಲ್ಲಿ ಸ್ವತಃ ರಾಜೀನಾಮೆ ನೀಡದಿದ್ದರೆ ಅವರನ್ನು ಪ್ರಧಾನಿ ಅವರು ವಜಾ ಮಾಡಬೇಕು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವೇಡ್‌ಕರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT