ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.21ರಿಂದ ಕೊಡವ ಹಾಕಿ ಉತ್ಸವ

Last Updated 17 ಜನವರಿ 2012, 5:55 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಐಚೆಟ್ಟಿರ ಹಾಕಿ ಕಪ್ ಪಂದ್ಯಾಟವು ಏಪ್ರಿಲ್ 21ರಿಂದ ಮೇ 13ರ ವರೆಗೆ ಅಮ್ಮತ್ತಿಯಲ್ಲಿ ನಡೆಯಲಿದೆ ಎಂದು ಪಂದ್ಯಾಟವನ್ನು ಆಯೋಜಿಸಿರುವ ಸಮಿತಿಯ ಅಧ್ಯಕ್ಷ ಐ.ಕೆ.ಅನಿಲ್ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತದ ಅತಿ ದೊಡ್ಡ ಕುಟುಂಬಗಳ ಪಂದ್ಯಾಟ ಎಂದು ಲಿಮ್ಕಾ ಪುಸ್ತಕದಲ್ಲಿ ದಾಖಲೆಯಾಗಿದೆ ಎಂದು ಹೇಳಿದರು.

ಏಪ್ರಿಲ್ 21ರಿಂದ ಆರಂಭವಾಗಲಿರುವ ಪಂದ್ಯಾಟ, 23 ದಿನಗಳ ಕಾಲ ನಡೆಯಲಿದ್ದು, ಈ ಪಂದ್ಯಾಟದಲ್ಲಿ 250 ತಂಡಗಳು ಭಾಗವಹಿಸಲ್ದ್ದಿದಾರೆ. ಹಾಗೆಯೇ ಸುಮಾರು 30 ಸಾವಿರ   ಕ್ರೀಡಾಭಿಮಾನಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ಐಚೆಟ್ಟಿರ ಹಾಕಿ ಪಂದ್ಯಾಟವನ್ನು ಕೊಡಗು ಹಾಕಿ ಸಮಿತಿಯ ವತಿಯಿಂದ ಆರಂಭಿಸಿದ್ದು, ಈ ಪಂದ್ಯಾಟವು ಕ್ರೀಡಾಭಿಮಾನಿಗಳಲ್ಲಿ ಉತ್ತಮ  ಕ್ರೀಡಾಸಕ್ತಿಯನ್ನು ಬೆಳೆಸಲು ಸಹಾಯಕವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಐ.ಪಿ. ಕುಟ್ಟಪ್ಪ, ಕಾರ್ಯದರ್ಶಿ ಸುಬ್ರಮಣಿ, ಐ.ಎಂ. ಖಜಾಂಚಿ ರವಿ ಸೋಮಯ್ಯ, ರಾಣಾ ಐ.ಚೆಟ್ಟೀರ ಮತ್ತಿತರರು ಉಪಸ್ಥಿತರಿದ್ದರು,
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT