ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ ಅಂತ್ಯದಲ್ಲಿ ಎನ್‌ಟಿಪಿಗೆ ಒಪ್ಪಿಗೆ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ಟೆಲಿಕಾಂ ಇಲಾಖೆ ಸಿದ್ಧಪಡಿಸಿರುವ ನೂತನ ದೂರಸಂಪರ್ಕ ನೀತಿ 2011ಕ್ಕೆ (ಎನ್‌ಟಿಪಿ) ಏಪ್ರಿಲ್ ಅಂತ್ಯದ ವೇಳೆಗೆ ಮಂಜೂರಾತಿ ದೊರಕಲಿದೆ.

 ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದ ದೂರಸಂಪರ್ಕ ನೀತಿಯ ಸಂಪುಟ ಟಿಪ್ಪಣಿಯನ್ನು ಸಂಬಂಧಪಟ್ಟ ಸಚಿವರಿಗೆ ಮಂಗಳವಾರ ನೀಡಲಾಗುವುದು ಮತ್ತು ಈ ಸಚಿವರು ಮಾರ್ಚ್ 6ರ ಒಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಲಾಗಿದೆ.

ಹೊಸ ನೀತಿಯ ಮೇಲಿನ ಟಿಪ್ಪಣಿ ಬಗ್ಗೆ ಮಾರ್ಚ್ 21ರಂದು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಏಪ್ರಿಲ್ ಅಂತ್ಯದ ವೇಳೆಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳು ಇವೆ.

ಉದ್ದೇಶಿತ ಹೊಸ ನೀತಿಯಲ್ಲಿ ನಿರ್ವಾಹಕರು ಮುಂಬೈ ಮತ್ತು ದೆಹಲಿ ಹೊರತುಪಡಿಸಿ ಗರಿಷ್ಠ 8 ಎಂಎಚ್‌ಝಡ್ ತರಂಗಾಂತರವನ್ನು ಪಡೆಯಲು ಅವಕಾಶವಿದೆ.

ಮುಂಬೈ ಮತ್ತು ದೆಹಲಿಯಲ್ಲಿ ಗರಿಷ್ಠ 10 ಎಂಎಚ್‌ಝಡ್ ತರಂಗಾಂತರವನ್ನು ಪಡೆಯಲು ಅವಕಾಶವಿದೆ.
ಕಂಪೆನಿಗಳ ವಿಲೀನ ಮತ್ತು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಹೊಸ ನೀತಿಯಲ್ಲಿ ಸರಳಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT