ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಚೆಸ್: ಭಕ್ತಿ ಕುಲಕರ್ಣಿ ಚಾಂಪಿಯನ್

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಪಣಜಿ (ಐಎಎನ್‌ಎಸ್): ಭಾರತದ ಭಕ್ತಿ ಕುಲಕರ್ಣಿ ಕೊಲಂಬೊದಲ್ಲಿ ನಡೆದ ಏಷ್ಯನ್ ಜೂನಿಯರ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಬೆಂಟೋಟಾ ಬೀಚ್ ರೆಸಾರ್ಟ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಆತಿಥೇಯ ಆಟಗಾರ್ತಿ ಎ.ದಿಸ್ಸಾನಾಯಕೆ ಅವರ ಸವಾಲನ್ನು ಹಿಮ್ಮೆಟ್ಟಿ ನಿಂತ ಭಕ್ತಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

20ರ ಹರೆಯದ ಭಕ್ತಿ ಗೋವಾದ ಮೊದಲ ಮಹಿಳಾ ಅಂತರರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ ಕೂಡ. ಅವರು 2006 ಹಾಗೂ 2010ರಲ್ಲಿ ಕ್ರಮವಾಗಿ 14 ವರ್ಷ ಮತ್ತು 16 ವರ್ಷದೊಳಗಿನವರ ವಿಭಾಗದಲ್ಲಿ ಏಷ್ಯನ್ ಚಾಂಪಿಯನ್ ಆಗಿದ್ದರು.

`ಈ ಪ್ರಶಸ್ತಿ ಜಯಿಸಿರುವುದು ತುಂಬಾ ಖುಷಿ ಉಂಟು ಮಾಡಿದೆ. ಆದರೆ ನಾನೀಗ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ಗೆ ತಯಾರಿ ನಡೆಸಬೇಕು~ ಎಂದು ಭಕ್ತಿ ಹೇಳಿದ್ದಾರೆ. 2012ರಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ಅಥೆನ್ಸ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT