ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಪೆಸಿಫಿಕ್‌ಗೆ ರಫ್ತು: ಚಹಾ ಮಂಡಳಿ ಚಿಂತನೆ

Last Updated 17 ಜನವರಿ 2011, 19:30 IST
ಅಕ್ಷರ ಗಾತ್ರ

ಸಿಂಗಪುರ (ಪಿಟಿಐ): ಏಷ್ಯಾ ಪೆಸಿಫಿಕ್ ಮಾರುಕಟ್ಟೆಗಳಿಗೆ ಚಹಾವನ್ನು ರಫ್ತು ಮಾಡುವುದಕ್ಕೆ ಸಿಂಗಪುರವನ್ನು ವೇದಿಕೆಯನ್ನಾಗಿ ಮಾಡಲು ಯೋಜನೆ ರೂಪಿಸುತ್ತಿರುವುದಾಗಿ ಭಾರತೀಯ ಚಹಾ ಮಂಡಳಿ ತಿಳಿಸಿದೆ.

ಇಲ್ಲಿ ಸೋಮವಾರ ಖರೀದಿದಾರರ-ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಂಡಳಿಯ ಉಪಾಧ್ಯಕ್ಷೆ ರಶ್ಮಿ ಸೆನ್, ಭಾರತದ ಮಟ್ಟಿಗೆ ಸಿಂಗಪುರ ಚಹಾ ಮಾರುಕಟ್ಟೆ ಸಣ್ಣದು, ಆದರೆ ಏಷ್ಯಾ ಪೆಸಿಫಿಕ್ ಭಾಗಕ್ಕೆ ಹಣಕಾಸು ಮತ್ತು ವ್ಯಾಪಾರದ ಕೇಂದ್ರವಾಗಿ ಸಿಂಗಪುರವನ್ನು ಮಾಡಿಕೊಂಡು ಚಹಾ ರಫ್ರಿಗೆ ಉತ್ತಮ ಅವಕಾಶ ಇದೆ. ಇದನ್ನು ಭಾರತ ಬಳಸಿಕೊಳ್ಳಲಿದೆ ಎಂದರು. ಸದ್ಯ ಈ ಭಾಗಕ್ಕೆಲ್ಲ ಚೀನಾದ ಚಹಾ ರಫ್ತಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT