ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಟ್ವೆಂಟಿ-20: ಮುಂಬೈ ಇಂಡಿಯನ್ಸ್‌ಗೆ ಮಣಿದ ಚಾರ್ಜಸ್

Last Updated 24 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ):  ಮುಂಬೈ ಇಂಡಿಯನ್ಸ್ ತಂಡ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ದಿನ ಗೆಲುವಿನ ಉಡುಗೊರೆ ನೀಡಿತು. ಐಪಿಎಲ್ ಟ್ವೆಂಟಿ-20 ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಮುಂಬೈ ತಂಡ 37 ರನ್‌ಗಳಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಮಣಿಸಿತು.

ರೋಹಿತ್ ಶರ್ಮ (ಔಟಾಗದೆ 56, 34 ಎಸೆತ, 5ಬೌಂ, 3 ಸಿಕ್ಸರ್) ಮತ್ತು ಆ್ಯಂಡ್ರ್ಯೂ ಸೈಮಂಡ್ಸ್ (ಔಟಾಗದೆ 44, 33 ಎಸೆತ, 4ಬೌಂ, 1 ಸಿಕ್ಸರ್) ಅವರ ಅಬ್ಬರದ ಬ್ಯಾಟಿಂಗ್ ಮತ್ತು ಲಸಿತ್ ಮಾಲಿಂಗ (9ಕ್ಕೆ 3) ತೋರಿದ ಪ್ರಭಾವಿ ಬೌಲಿಂಗ್ ಮುಂಬೈ ತಂಡದ ಗೆಲುವಿಗೆ ಕಾರಣವಾಯಿತು.

ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 172 ರನ್ ಪೇರಿಸಿತು. ಕುಮಾರ ಸಂಗಕ್ಕಾರ ನೇತೃತ್ವದ ಡೆಕ್ಕನ್ ಚಾರ್ಜರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 135 ರನ್ ಗಳಿಸಲಷ್ಟೇ ಯಶಸ್ವಿಯಾಯಿತು. ಈ ಗೆಲುವಿನ ಮೂಲಕ ಆರು ಪಂದ್ಯಗಳಿಂದ 10 ಪಾಯಿಂಟ್ ಕಲೆಹಾಕಿರುವ ಮುಂಬೈ ಇಂಡಿಯನ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಸವಾಲಿನ ಗುರಿ ಬೆನ್ನಟ್ಟಿದ ಚಾರ್ಜರ್ಸ್ ತಂಡಕ್ಕೆ ಮಾಲಿಂಗ ಆಘಾತ ನೀಡಿದರು. ತಮ್ಮ ನಾಲ್ಕು ಓವರ್‌ಗಳಲ್ಲಿ ಅವರು ಬಿಟ್ಟುಕೊಟ್ಟದ್ದು ಒಂಬತ್ತು ರನ್ ಮಾತ್ರ! ಶಿಖರ್ ಧವನ್ (25) ಮತ್ತು ಕುಮಾರ ಸಂಗಕ್ಕಾರ (34) ಅವರ ಮಹತ್ವದ ವಿಕೆಟ್‌ಗಳನ್ನು ಮಾಲಿಂಗ ಪಡೆದರು. ಚಾರ್ಜರ್ಸ್ ತಂಡಕ್ಕೆ ಯಾವುದೇ ಹಂತದಲ್ಲೂ ಎದುರಾಳಿ ತಂಡಕ್ಕೆ ಬೆದರಿಕೆ ಹುಟ್ಟಿಸಲು ಸಾಧ್ಯವಾಗಲಿಲ್ಲ. ಮಾಲಿಂಗ ಒಳಗೊಂಡಂತೆ ಮುಂಬೈ ತಂಡದ ಎಲ್ಲ ಬೌಲರ್‌ಗಳು ಚುರುಕಿನ ಬೌಲಿಂಗ್ ಇದಕ್ಕೆ ಕಾರಣ.

ರೋಹಿತ್, ಸೈಮಂಡ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭ ಪಡೆದರೂ ಬಳಿಕ ಇದ್ದಕ್ಕಿದ್ದಂತೆ ಕುಸಿತ ಅನುಭವಿಸಿತು. ಈ ಹಂತದಲ್ಲಿ ರೋಹಿತ್ ಹಾಗೂ ಸೈಮಂಡ್ಸ್ ಆಪದ್ಭಾಂದವರಾದರು. ಸಚಿನ್ ತೆಂಡೂಲ್ಕರ್ (28, 24 ಎಸೆತ, 4 ಬೌಂ) ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 47 ರನ್‌ಗಳನ್ನು ಸೇರಿಸಿದರು.

ಸ್ಕೋರು ವಿವರ

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 172
ಡೇವಿ ಜೇಕಬ್ಸ್ ಸಿ ಓಜಾ ಬಿ ಇಶಾಂತ್ ಶರ್ಮ  32
ಸಚಿನ್ ತೆಂಡೂಲ್ಕರ್ ಸಿ ಸ್ಟೇನ್ ಬಿ ಅಮಿತ್ ಮಿಶ್ರಾ  28
ಅಂಬಟಿ ರಾಯುಡು ಸಿ ಧವನ್ ಬಿ ಅಮಿತ್ ಮಿಶ್ರಾ  07
ಕೀರನ್ ಪೊಲಾರ್ಡ್ ಸಿ ಸಂಗಕ್ಕಾರ ಬಿ ಪ್ರಗ್ಯಾನ್ ಓಜಾ  00
ರೋಹಿತ್ ಶರ್ಮ ಔಟಾಗದೆ  56
ಆ್ಯಂಡ್ರ್ಯೂ ಸೈಮಂಡ್ಸ್ ಔಟಾಗದೆ  44
ಇತರೆ: (ಲೆಗ್‌ಬೈ-3, ವೈಡ್-2)  05
ವಿಕೆಟ್ ಪತನ: 1-47 (ಜೇಕಬ್ಸ್; 5.1), 2-70 (ಸಚಿನ್; 8.2), 3-70 (ರಾಯುಡು; 8.4), 4-70 (ಪೊಲಾರ್ಡ್; 9.1)
ಬೌಲಿಂಗ್: ಅಮಿತ್ ಮಿಶ್ರಾ 4-0-14-2, ಡೆಲ್ ಸ್ಟೇನ್ 4-0-39-0, ಪ್ರಗ್ಯಾನ್ ಓಜಾ 4-0-29-1, ಇಶಾಂತ್ ಶರ್ಮ 4-0-29-1, ಡೇನಿಯಲ್ ಕ್ರಿಸ್ಟಿಯನ್ 4-0-48-0

ಡೆಕ್ಕನ್ ಚಾರ್ಜರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 135
ಸನ್ನಿ ಸೋಹಲ್ ರನೌಟ್  05
ಶಿಖರ್ ಧವನ್ ಬಿ ಲಸಿತ್ ಮಾಲಿಂಗ  25
ಕುಮಾರ ಸಂಗಕ್ಕಾರ ಬಿ ಲಸಿತ್ ಮಾಲಿಂಗ  34
ಕ್ಯಾಮರೂನ್ ವೈಟ್ ರನೌಟ್  01
ಭರತ್ ಚಿಪ್ಲಿ ಸಿ ಸತೀಶ್ ಬಿ ಕೀರನ್ ಪೊಲಾರ್ಡ್  06
ಡೇನಿಯಲ್ ಕ್ರಿಸ್ಟಿಯನ್ ಸ್ಟಂಪ್ ಜೇಕಬ್ಸ್ ಬಿ ಪಟೇಲ್  21
ರವಿ ತೇಜ ಸಿ ಮತ್ತು ಬಿ ಮಾಲಿಂಗ  01
ಅಮಿತ್ ಮಿಶ್ರಾ ಔಟಾಗದೆ  25
ಡೆಲ್ ಸ್ಟೇನ್ ರನೌಟ್ 04
ಇಶಾಂತ್ ಶರ್ಮ ಔಟಾಗದೆ 01
ಇತರೆ: (ಲೆಗ್‌ಬೈ-1, ವೈಡ್-7) 08
ವಿಕೆಟ್ ಪತನ: 1-14 (ಸೋಹಲ್; 1.5), 2-41 (ಧವನ್; 5.4), 3-54 (ವೈಟ್; 7.3), 4-70 (ಚಿಪ್ಲಿ; 9.4), 5-93 (ಸಂಗಕ್ಕಾರ; 13.3), 6-99 (ಕ್ರಿಸ್ಟಿಯನ್; 14.4), 7-101 (ರವಿ ತೇಜ; 15.3), 8-128 (ಸ್ಟೇನ್; 18.5)
ಬೌಲಿಂಗ್: ಮುನಾಫ್ ಪಟೇಲ್ 4-0-35-1, ಹರಭಜನ್ ಸಿಂಗ್ 4-0-27-0, ನೆಚಿಮ್ ಅಹ್ಮದ್ 4-0-27-0, ಲಸಿತ್ ಮಾಲಿಂಗ 4-0-9-3, ಕೀರನ್ ಪೊಲಾರ್ಡ್ 2-0-20-1, ಆರ್. ಸತೀಶ್ 2-0-12-0
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 37 ರನ್ ಗೆಲುವು; ಪಂದ್ಯಶ್ರೇಷ್ಠ: ಲಸಿತ್ ಮಾಲಿಂಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT