ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವತ್ತೊಂದರ ಹುರುಪು

ಪಿಕ್ಚರ್ ಪ್ಯಾಲೆಸ್
Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಸಿನಿಮಾದ ಯಶಸ್ಸು, ವೈಫಲ್ಯದ ಗ್ರಾಫ್‌ನಿಂದ ವ್ಯತಿರಿಕ್ತ ಪರಿಣಾಮವನ್ನು ಅಷ್ಟಾಗಿ ಎದುರಿಸದ ಕನ್ನಡದ ನಟರ ಪಟ್ಟಿ ಮಾಡತೊಡಗಿದರೆ ಶಿವರಾಜ್‌ಕುಮಾರ್ ಹೆಸರು ಎದ್ದುಕಾಣುತ್ತದೆ. ಹೊಸ ಚಿತ್ರಕ್ಕೆ `ಸಿಕ್ಸ್‌ಪ್ಯಾಕ್' ಮಾಡಿಕೊಳ್ಳುತ್ತಿರುವ ಅವರು ಇನ್ನೂ ಸಪೂರವಾಗಿದ್ದಾರೆ.

ಮುಖದ ಮೇಲೆ ಗಡ್ಡ ಮೂಡಿದೆ. ಸಿನಿಮಾ ಬಯಸುವ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹಾಕಾರದಲ್ಲಿ ಮಾರ್ಪಾಟು ಮಾಡಿಕೊಳ್ಳಲು ಹಿಂದೇಟು ಹಾಕದ ಅವರಿಗೆ ಶುಕ್ರವಾರ (ಜುಲೈ 12) ಐವತ್ತೊಂದು ತುಂಬಿತು. ಮುಖದಲ್ಲಿ ಬತ್ತದ ಉತ್ಸಾಹ ತುಂಬಿಕೊಂಡಿದ್ದ ಅವರ ಹುಟ್ಟುಹಬ್ಬಕ್ಕೆ ಯಾವುದೋ ದೂರದ ಹಳ್ಳಿಯ ಮಕ್ಕಳಿಂದ ಹಿಡಿದು ತಮ್ಮಂದಿರೂ ಸಾಕ್ಷಿಯಾದರು. ಅಭಿಮಾನಿಗಳು ತಂದ ಕೇಕ್‌ನ ಸಿಹಿ ಸವಿದ ಕ್ಷಣಗಳ ಚಿತ್ರಪಟ ಇದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT