ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘ: ಮುಗಿಯದ ಮತ ಎಣಿಕೆ

Last Updated 9 ಜನವರಿ 2014, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಕ್ಷೇತ್ರ­ಗಳಿಗೆ ಭಾನುವಾರ ನಡೆದ ಚುನಾ­ವಣೆಯ ಮತ ಎಣಿಕೆ ಕಾರ್ಯ ಗುರು­ವಾರ ತಡರಾತ್ರಿಗೂ ಮುಂದು­ವರಿಯಿತು. ಮತ ಎಣಿಕೆಯನ್ನು ತ್ವರಿತ­ಗೊಳಿ­ಸುವ ನಿಟ್ಟಿನಲ್ಲಿ ಬುಧವಾರ 300 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಗುರುವಾರ ಮತ್ತೆ ಹೆಚ್ಚುವರಿ­ಯಾಗಿ 200 ಸಿಬ್ಬಂದಿಯ ನೆರವು ಪಡೆಯುವ ಮೂಲಕ ಎಣಿಕೆಯನ್ನು ಚುರುಕು­ಗೊಳಿಸಲಾಯಿತು. ಈ ಕ್ಷೇತ್ರ­ಗಳ 15 ಸ್ಥಾನಗಳಿಗೆ ನಡೆದ ಚುನಾ­ವಣೆಯ ಮತ ಎಣಿಕೆ ಸೋಮವಾರ ಆರಂಭ­ವಾಗಿತ್ತು. ಗೊಂದಲ ಉಂಟಾ­ಗಿದ್ದರಿಂದ ಮರುಎಣಿಕೆ ಮಾಡ­ಲಾ­ಯಿತು. ಪತ್ರಿಕೆ ಮುದ್ರಣಕ್ಕೆ ಹೋಗು­ವ­ವರೆಗೂ ಮತ ಎಣಿಕೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT