ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘ: ಶೇ 88.31ರಷ್ಟು ಮತದಾನ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ 35 ನಿರ್ದೇಶಕರ ಸ್ಥಾನ­ಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇಕಡ 88.31 ರಷ್ಟು ಮತದಾನವಾಗಿದೆ.

ಒಟ್ಟು 2,74,123 ಸದಸ್ಯರ ಪೈಕಿ 2,73,524 ಸದಸ್ಯರು ಮತ ಚಲಾಯಿಸಿದ್ದಾರೆ.

ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಸಂಘದ ಚುನಾವಣೆಗೆ 254 ಅಭ್ಯರ್ಥಿ­ಗಳು ಸ್ಪರ್ಧಿಸಿದ್ದಾರೆ. ರಾಮನಗರ, ಬೆಂಗ­ಳೂರು ನಗರ ಮತ್ತು ಗ್ರಾಮಾಂ­ತರ ಜಿಲ್ಲೆಗಳನ್ನು ಒಳ­ಗೊಂಡ ಕ್ಷೇತ್ರ­ದಿಂದಲೇ ಅತ್ಯಧಿಕ 15 ಸ್ಥಾನಗಳಿಗೆ ಹಾಗೂ ಮಂಡ್ಯ 4, ಮೈಸೂರು,  ಕೋಲಾರ, ಹಾಸನ  ಕ್ಷೇತ್ರ­ಗಳಿಂದ ತಲಾ 3, ತುಮಕೂರು ಕ್ಷೇತ್ರದಿಂದ 2,  ಚಿಕ್ಕ­ಮಗಳೂರು, ಚಿತ್ರದುರ್ಗ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಕ್ಷೇತ್ರಗಳಿಂದ ತಲಾ 1 ಸ್ಥಾನಕ್ಕೆ ಭಾನು­ವಾರ ಮತದಾನ ನಡೆಯಿತು. ಒಟ್ಟು 11 ಜಿಲ್ಲಾ ಕ್ಷೇತ್ರಗಳ 81 ಮತ­ದಾನ ಕೇಂದ್ರಗಳಲ್ಲಿ ಮತದಾನ ನಡೆ-­ಯಿತು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂ­ತರ ಮತ್ತು ರಾಮನಗರ ಜಿಲ್ಲೆ­ಯಲ್ಲಿ ಶೇ  82.81 ರಷ್ಟು ಮತದಾನವಾಗಿದೆ ಎಂದು     ಚುನಾವಣಾಧಿ­ಕಾರಿ ಬಿ.ಸಿ.ಸತೀಶ್‌ ಅವರು ತಿಳಿಸಿದ್ದಾರೆ.

ಇಂದು ಮತ ಎಣಿಕೆ: ಸೋಮವಾರ ಬೆಳಿಗ್ಗೆ 9ರಿಂದ ಆಯಾ ಜಿಲ್ಲಾ ಕ್ಷೇತ್ರದ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT