ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿಗೆ ಜನಗಣತಿ ವೇದಿಕೆಯಾಗಲಿ: ಮಾಡಾಳ್

Last Updated 20 ಜನವರಿ 2011, 7:15 IST
ಅಕ್ಷರ ಗಾತ್ರ

ದಾವಣಗೆರೆ: ವೀರಶೈವ-ಲಿಂಗಾಯತರೆಲ್ಲರೂ ಒಳಪಂಗಡಗಳನ್ನು ಬದಿಗಿಟ್ಟು ಎಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಪ್ರದರ್ಶಿಸಬೇಕು ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕರೆ ನೀಡಿದರು.ನಗರದ ಶಿವಯೋಗಾಶ್ರಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಕಲಾ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ ಆರಂಭವಾಗುವ ಜನಗಣತಿಯ ಧರ್ಮದ ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದು ನಮೂದಿಸಿ, ಉಪ ಜಾತಿಗಳನ್ನು ಬರೆಯದೇ ಬಿಡಬೇಕು. ಇದರಿಂದ ಇಡೀ ವೀರಶೈವರ ಸಂಖ್ಯೆಯನ್ನು ಒಟ್ಟಾಗಿ ಲೆಕ್ಕಹಾಕಲು ಸಾಧ್ಯವಾಗುತ್ತದೆ. ಒಗ್ಗಟ್ಟಿಗೂ ವೇದಿಕೆಯಾಗುತ್ತದೆ ಎಂದು ಸಲಹೆ ನೀಡಿದರು.

ಸಾಮಾಜಿಕ ಸಮಾನತೆಯನ್ನು, ಲಿಂಗತಾರತಮ್ಯ ರಹಿತ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿಯೇ ಜಗತ್ತಿಗೆ ಪರಿಚಯಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಎಲ್ಲ ಧರ್ಮಗಳ ಸಾರವನ್ನು ಅಳವಡಿಸಿಕೊಂಡು ಬೆಳೆದ ಧರ್ಮ ಲಿಂಗಾಯತ ಧರ್ಮ. ಶಿಕ್ಷಣ, ಸವಲತ್ತು ಕೆಲವರಿಗೇ ಸೀಮಿತವಾಗಿದ್ದ ಸಂದರ್ಭದಲ್ಲಿ ಅದನ್ನು ಎಲ್ಲರಿಗೂ ಸಲ್ಲುವಂತೆ ಮಾಡಿದ ಕೀರ್ತಿ ವೀರಶೈವ-ಲಿಂಗಾಯತರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಬುದ್ಧ, ಬಸವ, ಗಾಂಧಿ, ಮಹಾವೀರ, ಜಯದೇವಶ್ರೀ ಅವರಂತಹ ಮಹನೀಯರು ಮಾಡಿದ ಸಾರ್ಥಕ ಸೇವೆಯನ್ನು ಪ್ರತಿಯೊಬ್ಬರು ನೆನೆಯಬೇಕು. ಅವರ ತತ್ವ-ಆದರ್ಶಗಳನ್ನು ಪಾಲಿಸಬೇಕು. ಆಗ ಜೀವನ ಸಾರ್ಥಕವಾಗುತ್ತದೆ ಎಂದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವಿರಕ್ತ ಮಠದ ಚರಮೂರ್ತಿ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಾನಪದ ಕಲೆ ಉಳಿಸಿ ಬೆಳೆಸುವ ಹೊಣೆಗಾರಿಗೆ ಯುವಪೀಳಿಗೆಯ ಮೇಲಿದೆ. ಜಾನಪದ ಸಂಸ್ಕೃತಿಯೇ ನಮ್ಮ ದೇಶದ ಸಂಸ್ಕೃತಿ ಎಂದು ಬಣ್ಣಿಸಿದರು.

ಜಯದೇವಶ್ರೀಗಳು ಜಾನಪದ ಕಲೆಯ ಉಳಿವಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅನೇಕ ಜಾನಪದ ಕಲಾತಂಡಗಳನ್ನು ಅವರು ಕಟ್ಟಿ ಬೆಳೆಸಿದರು. ಮುರುಘಾ ಶರಣರು ‘ಜಮುರಾ’ ಕಲಾ ತಂಡವನ್ನು ಹುಟ್ಟುಹಾಕುವ ಮೂಲಕ ಕಲಾ ಪ್ರಸಾರಕ್ಕೆ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಬಸವಮಹಾಂತ ಸ್ವಾಮೀಜಿ, ಪಾಲಿಕೆ ಸದಸ್ಯರಾದ ರುದ್ರಮುನಿಸ್ವಾಮಿ, ಸುರೇಶ್, ಡಾ.ಎಸ್.ಎಂ. ಎಲಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT