ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಯನ್ ಆಗುವ ಕನಸು ಕಮರಿತು

Last Updated 25 ಫೆಬ್ರುವರಿ 2012, 20:00 IST
ಅಕ್ಷರ ಗಾತ್ರ

ನವದೆಹಲಿ: `ಒಲಿಂಪಿಯನ್ ಆಗುವ ನಮ್ಮ ಕನಸು ನನಸಾಗಲಿಲ್ಲ. ಇಷ್ಟು ವರ್ಷಗಳ ಶ್ರಮ ವ್ಯರ್ಥವಾಯಿತು..~-
ಜಾರ್ಖಂಡ್ ಹುಡುಗಿ, ಭಾರತ ಮಹಿಳಾ ಹಾಕಿ ತಂಡದ ನಾಯಕಿ ಅಸುಂತಾ ಲಕ್ರಾ ಇಷ್ಟು ಹೇಳುವಷ್ಟರಲ್ಲಿ ಗಂಟಲುಬ್ಬಿತ್ತು. ಕಂಗಳಿಂದ ಹನಿಗಳು ಇಣುಕುತ್ತಿದ್ದವು.

ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಲಂಡನ್ ಒಲಿಂಪಿಕ್ಸ್ ಅರ್ಹತೆಯನ್ನು ಕಳೆದುಕೊಂಡ ನಂತರ ಒಲ್ಲದ ಮನಸ್ಸಿನಿಂದ ಮಾಧ್ಯಮದವರ ಮುಂದೆ ಬಂದಿದ್ದರು.

`ಪಾಸಿಂಗ್, ಬ್ಲಾಕಿಂಗ್‌ನಲ್ಲಿಯೂ ನಮ್ಮಿಂದ ತಪ್ಪಾಗಿವೆ ನಿಜ. ಆ ತಂಡವೂ ಉತ್ತಮವಾಗಿ ಆಡಿತು. ನಮ್ಮ ದಾಳಿಯನ್ನೂ ಸಮರ್ಥವಾಗಿ ತಡೆಯಿತು. ಆರಂಭದಲ್ಲಿಯೇ ಒಂದು ಗೋಲು ಕೊಟ್ಟಿದ್ದು ಕೂಡ ತುಟ್ಟಿಯಾಯಿತು. ಆದರೂ ನಮ್ಮ ಹೋರಾಟವನ್ನು ಕೊನೆಯ ಕ್ಷಣದವರೆಗೂ ನಡೆಸಿದೆವು~ ಎಂದರು.

`ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾಕ್ಕೆ ನಾವು ಸೋತಿದ್ದು, ಫೈನಲ್‌ನಲ್ಲಿ ಅವರನ್ನು ಸೋಲಿಸಲೇಬೇಕು ಎಂಬ ಛಲದಿಂದ ತಂಡವು ಆಟ ಆರಂಭಿಸಿತ್ತು. ಯಾವುದೇ ರೀತಿಯ ಒತ್ತಡ ನಮ್ಮಲ್ಲಿರಲಿಲ್ಲ. ಆಟದಲ್ಲಿ ಸೋಲು, ಗೆಲುವು ಸಹಜ~ ಎಂದರು.

`ಈಗ ಸೋತಿದ್ದರೂ ಮುಂದಿನ ದಿನಗಳಲ್ಲಿ ಈ ತಂಡದ ಆಟಗಾರ್ತಿಯರಿಗೆ ಉತ್ತಮ ಭವಿಷ್ಯವಿದೆ. ಅರ್ಹತಾ ಸುತ್ತಿನಲ್ಲಿ ಫೈನಲ್ ತಲುಪಿದ್ದು ಬಹಳ ವರ್ಷಗಳ ನಂತರದ ಸಫಲತೆ. ಮುಂದಿನ ದಿನಗಳಲ್ಲಿ ಭಾರತದ ಮಹಿಳಾ ಹಾಕಿ ಕ್ರೀಡೆಗೆ ಉತ್ತಮ ಅವಕಾಶ ಇದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT