ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಣಂ 5ದಿನಗಳ ಸಂತೆ, ಶಾಲಾ ಕೊಠಡಿ ಉದ್ಘಾಟನೆ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೃಷ್ಣರಾಜಪುರ: ದೂರವಾಣಿ ನಗರ ಕೇರಳ ಸಮಾಜದ ವತಿಯಿಂದ ಜ್ಯುಬಿಲಿ ಶಾಲಾ ಆವರಣದಲ್ಲಿ ಓಣಂ ಹಬ್ಬದ ನಿಮಿತ್ತ ಆಯೋಜಿಸಿರುವ ಐದು ದಿನಗಳ ಸಂತೆ ಹಾಗೂ ಶಾಲಾ ಹೆಚ್ಚುವರಿ ಕೊಠಡಿಗಳನ್ನು ಬಿಬಿಎಂಪಿ ಸದಸ್ಯ ಎನ್.ಬಸವರಾಜು ಉದ್ಘಾಟಿಸಿದರು.

`ಕೆಳ- ಮಧ್ಯಮ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಗಳು ಆಸರೆಯಾಗಬೇಕು. ಶಾಲೆಯಲ್ಲಿ ಓದುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಮಾಹಿತಿ ನೀಡಿದರೆ 10ನೇ ತರಗತಿವರೆಗೆ ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು~ ಎಂದು ಅವರು ಭರವಸೆ ನೀಡಿದರು.

`ಕೃಷ್ಣರಾಜಪುರ ಭಾಗದಲ್ಲಿ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಿದರೆ ಐಕ್ಯತೆ ಸಾಧಿಸಿದಂತಾಗುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳ ವಿನಿಮಯದಿಂದ ಮಾತ್ರ ಸುಮಧುರ ಬಾಂಧವ್ಯಕ್ಕೆ ಒತ್ತು ನೀಡಿದಂತೆ ಆಗುತ್ತದೆ~ ಎಂದು ಅಭಿಪ್ರಾಯಪಟ್ಟರು.
 
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪೀಟರ್ ಜಾರ್ಜ್ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಜಿ.ಎ. ಮುನಿರಾಜು, ಶಾಲೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡೆನ್ನಿಸ್ ಬಾಲ್, ಸದಸ್ಯರಾದ ಗಿರೀಶ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT