ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ನ ಪ್ರಾಥಮಿಕ ಜ್ಞಾನ ಅಗತ್ಯ: ಸಲಹೆ

Last Updated 4 ಜನವರಿ 2011, 10:25 IST
ಅಕ್ಷರ ಗಾತ್ರ

ಶಿಕಾರಿಪುರ: ಆಧುನಿಕ ಪ್ರಪಂಚಕ್ಕೆ ತಕ್ಕಂತೆ ಮಹಿಳೆಯರೂ ತರಬೇತಿಗಳ ಮೂಲಕ ಬದಲಾವಣೆಯತ್ತ ಸಾಗುವುದು ಇಂದಿನ ಅನಿವಾರ್ಯವಾಗಿದೆ ಎಂದು ಉಪನ್ಯಾಸಕ ಈಶ್ವರ್ ಹೇಳಿದರು. ಪಟ್ಟಣದಲ್ಲಿ ಸೋಮವಾರ ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕ್ ವತಿಯಿಂದ ನಡೆದ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಪ್ಯೂಟರ್‌ನ ಪ್ರಾಥಮಿಕ ಜ್ಞಾನ ಹೊಂದುವುದು ಇಂದಿನ ಅನಿವಾರ್ಯ. ಗ್ರಾಮೀಣ ಸೇವೆ, ಹಣಕಾಸು ಸೇರಿದಂತೆ ಹಲವು ವಲಯಗಳು ಇದೀಗ ಸಂಪೂರ್ಣ ಗಣಕೀಕೃತವಾಗುತ್ತಿದೆ. ಇದರೊಂದಿಗೆ ಹೊಂದಿಕೊಂಡು ಹೋಗುವಂತಹ ತರಬೇತಿಗಳನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಅವರುಅಭಿಪ್ರಾಯಪಟ್ಟರು. ರಾಣಿ ಚನ್ನಮ್ಮಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ವಿಶಾಲಾಕ್ಷಿ ವೇಣುಗೋಪಾಲ್ ಮಾತನಾಡಿ, ಕೇವಲ ಹಣಕಾಸು ವಹಿವಾಟು ನಡೆಸುವುದಕ್ಕಿಂತಲೂ ಸಮಾಜಕ್ಕೆ ಏನಾದರೂ ಹೊಸತು ನೀಡಬೇಕು ಎನ್ನುವ ಕಾರಣಕ್ಕೆ ಸಂಘ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ಮಹಿಳೆಯೂ ಬ್ಯಾಂಕ್ ವ್ಯವಹಾರ ನಡೆಸುವುದನ್ನು ಕಲಿಯಬೇಕು ಎನ್ನುವುದು ಸಂಘದ ಉದ್ದೇಶವಾಗಿದೆ. ಸಂಘದ ವತಿಯಿಂದ ಈಗಾಗಲೇ 256 ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ತರಬೇತಿ ನೀಡಲಾಗಿದ್ದು, ಇದೀಗ 9ನೇ ತಂಡಕ್ಕೆ ಇಂದಿನಿಂದ ತರಬೇತಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷೆ ನಗ್ಮಾ ನೌಶಾದ್, ನಿರ್ದೇಶಕರಾದ ಪರಸನ್‌ಬಾಯಿ, ಅನಿಲಮ್ಮ ಯೋಗೀಶ್, ಭಾಗ್ಯಾ ಬೂದ್ಯಪ್ಪ, ಎಚ್.ಆರ್. ರಾಘವೇಂದ್ರ, ಬಿ.ಆರ್. ಕನಕರಾಜ್,ಬಿ.ಸಿ. ವೇಣುಗೋಪಾಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯದರ್ಶಿ ಬೀರಲಿಂಗೇಶ್ ಸ್ವಾಗತಿಸಿದರು. ಭಾಗ್ಯಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT