ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಕಂಟಕ ಬಂದಾಗ ಹೋರಾಡಿ

Last Updated 1 ಜನವರಿ 2012, 11:05 IST
ಅಕ್ಷರ ಗಾತ್ರ

ಹಿರಿಯೂರು: ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್‌ಗೆ ಸೀಮಿತಗೊಳಿಸದೇ, ವರ್ಷವಿಡೀ ಆಚರಣೆ ಮಾಡುವಂತಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ತಾಲ್ಲೂಕು ಘಟಕದ ಅಧ್ಯಕ್ಷ ಕಾಂತರಾಜ್ ಹುಲಿ ಕರೆ ನೀಡಿದರು.

ಹಿರಿಯೂರಿನ ವೇದಾವತಿ ನಗರ ಬಡಾವಣೆಯ 100 ಅಡಿ ರಸ್ತೆಯಲ್ಲಿರುವ ಶಾಶ್ವತ ಕನ್ನಡ ಧ್ವಜಸ್ತಂಭದ ಆವರಣದಲ್ಲಿ ಈಚೆಗೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
 

ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆಗೆ ತೊಂದರೆ ಕೊಡುವ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ. ಕನ್ನಡ ನಾಡು-ನುಡಿಗೆ ಕಂಟಕ ಬಂದಾಗ ಸಿಡಿದೇಳುವ ಪ್ರವೃತ್ತಿಯನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ರಾಜ್ಯೋತ್ಸವದ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಸಿದ ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಲಾಯಿತು.
ಹಿರಿಯ ಶಿಕ್ಷಕ ನಿಜಲಿಂಗಪ್ಪ ಧ್ವಜಾರೋಹಣ ನೆರವೇರಿಸಿದರು.

ರಂಗೇನಹಳ್ಳಿ ತಿಪ್ಪೇಸ್ವಾಮಿ, ಸುರೇಶ್, ಕೃಷ್ಣ, ಡಿ. ಗುರು, ಹೇಮಂತ್ ಎಸ್. ಯಾದವ್, ವಿಕ್ರಮ್‌ಬಾನು, ಎಸ್.ಎಲ್. ಶಿವಕುಮಾರ್, ಪಿ. ಕೃಷ್ಣಮೂರ್ತಿ, ಕೆ.ಪಿ. ಶ್ರೀನಿವಾಸ್, ಜಿ.ಎಲ್. ಮೂರ್ತಿ, ತಿಪ್ಪೇಸ್ವಾಮಿ, ಓಂಕಾರಮೂರ್ತಿ, ಜಯಣ್ಣ, ರಾಘವೇಂದ್ರ, ಉಮೇಶ್, ನಿತ್ಯಾನಂದ, ವಿಜಯಕುಮಾರ್, ರಮೇಶ್, ರವಿ, ಕರಿಯಣ್ಣ, ರಾಘು, ಸಿದ್ದು, ಮುರಳಿ, ಮುತ್ತುರಾಜ್, ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT