ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಓದು ಹೆಚ್ಚು ಆಪ್ತ- ರಾಜೇಶ್ವರಿ ತೇಜಸ್ವಿ

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಕಥೆ, ಕಾದಂಬರಿಗಳನ್ನು ಕನ್ನಡದಲ್ಲಿ ಓದಿದಾಗ ಹೆಚ್ಚು ಆಪ್ತ ಎನಿಸುತ್ತವೆ. ಈಚಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟಗೊಳ್ಳುತ್ತಿರುವುದು ಶ್ಲಾಘನೀಯ' ಎಂದು ಡಾ.ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅಭಿಪ್ರಾಯಪಟ್ಟರು. 

ಛಂದ ಪುಸ್ತಕದ ಆಶ್ರಯದಲ್ಲಿ ನಗರದ ಉದಯಭಾನು ಕಲಾಸಂಘದಲ್ಲಿ ಭಾನುವಾರ ನಡೆದ ಮೂರು ಛಂದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಒಂದು ಕಾಲದಲ್ಲಿ ನನಗೆ ಬಸವನಗುಡಿ ಚಿರಪರಿಚಿತ ಆಗಿತ್ತು. ಈಗ ಈ ಪ್ರದೇಶದಲ್ಲಿ ಭಾರಿ ಬದಲಾವಣೆ ಆಗಿದೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಗರವು ಗುರುತು ಹತ್ತದಷ್ಟು ಪರಿವರ್ತನೆ ಹೊಂದಿದೆ' ಎಂದು ಅವರು ಅಭಿಪ್ರಾಯಪಟ್ಟರು.

ಮೈಂಡ್ ಟ್ರೀ ಕಂಪೆನಿಯ ಸಹಸಂಸ್ಥಾಪಕ ಸುಬ್ರೊತೋ ಬಾಗ್ಚಿ ಮಾತನಾಡಿ, `ಭವಿಷ್ಯದಲ್ಲಿ ದೇಶದಲ್ಲಿ ಮಾತೃಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ದೊರಕುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಲು ಇಂಗ್ಲಿಷ್ ಭಾಷೆಯ ಅರಿವು ಅಗತ್ಯ' ಎಂದರು. 

ಲೇಖಕ ಶ್ರೀರಾಮ್ ಎಂ.ಎಸ್.ಮಾತನಾಡಿ, `ಇಂಗ್ಲಿಷ್‌ನಿಂದ ಅನುವಾದ ಮಾಡುವಾಗ ಆಂಗ್ಲ ಪದಗಳನ್ನು ಉಳಿಸಿಕೊಳ್ಳಲು ಹಿಂಜರಿಯುತ್ತೇವೆ. ಕನ್ನಡ ಭಾಷೆಗೆ ಹೊಂದಿಕೆಯಾಗುವ ಪದಗಳನ್ನು ಉಳಿಸಿಕೊಳ್ಳಬಹುದು. ಕನ್ನಡ ಅಹಂ ಮುಂದಿಟ್ಟುಕೊಂಡು ಭಾಷಾಂತರ ಮಾಡುವುದು ಉತ್ತಮ ಅಲ್ಲ' ಎಂದರು.

ಈ ಸಂದರ್ಭದಲ್ಲಿ ಶ್ವೇತಾ ಅಡುಕಳ ಅವರಿಗೆ `ಛಂದ ಮುಖಪುಟ ವಿನ್ಯಾಸ ಬಹುಮಾನ' ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಲೀ ಕುನ್ ಕ್ಸಿನ್ ಆತ್ಮಕತೆ `ಮಾವೋನ ಕೊನೆಯ ನರ್ತಕ' (ಅನುವಾದ- ಜಯಶ್ರೀ ಭಟ್), ಸುಬ್ರೊತೋ ಬಾಗ್ಚಿ ಅವರ ಆತ್ಮಕತೆ `ಜಗವ ಚುಂಬಿಸು' (ಅನುವಾದ- ವಂದನಾ ಪಿ.ಸಿ.), ವಸುಧೇಂದ್ರ ಅವರ ಪ್ರಬಂಧ ಸಂಕಲನ `ವರ್ಣಮಯ' ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT