ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಐಡಲ್‌ಗೆ ಮೂವರ ಆಯ್ಕೆ

Last Updated 16 ಜನವರಿ 2012, 8:00 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಪ್ರತಿಭೆಗಳು ಸಾಕಷ್ಟಿದ್ದು ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂದು ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ನಾಯ್ಕ ಹೇಳಿದರು.

ನಗರದ ಟ್ಯಾಗೋರ ಕಡಲತೀರ ದಲ್ಲಿರುವ ಮಯೂರ ವರ್ಮ ವೇದಿಕೆಯಲ್ಲಿ ಇಲ್ಲಿಯ ಸೈನಿಂಗ್ ಸ್ಟಾರ್ ಅಸೋಸಿಯೇಶನ್, ರೋಟರಿ ಕ್ಲಬ್ ಮತ್ತು ಇನ್ನರ್‌ವಿಲ್ ಕ್ಲಬ್ ಆಶ್ರಯ ದಲ್ಲಿ ಶುಕ್ರವಾರ ರಾತ್ರಿ ನಡೆದ `ಕರಾವಳಿ ಐಡಲ್~ ಚಲನಚಿತ್ರ ಗೀತೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಪ್ರತಿಭೆ ಹೊರಹೊಮ್ಮಲು ಕರಾವಳಿ ಐಡಲ್ ವೇದಿಕೆಯಾಗಲಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಇಲ್ಲಿಯ ಪ್ರತಿಭೆಗಳು ಮಿಂಚಲಿ ಎಂದು   ಹಾರೈಸಿದರು.

ಪೌರಾಯುಕ್ತ ಡಾ. ಬಿ. ಉದಯಕುಮಾರ ಶೆಟ್ಟಿ, ಬಿಣಗಾದ ಸೋಲಾರಿಸ್ ಕೆಮ್‌ಟೆಕ್‌ನ ಮುಖ್ಯಸ್ಥ ಡಿ.ಆರ್.ಕಾಮತ್, ನಗರಸಭಾ ಅಧ್ಯಕ್ಷ ಗಣಪತಿ ಉಳ್ವೇಕರ ಮಾತನಾಡಿದರು.

ರೋಟರಿ ಕ್ಲಬ್ ಉಪಾಧ್ಯಕ್ಷ ಪ್ರಕಾಶ ಪಾಗಿ, ಕಾರ್ಯದರ್ಶಿ ರಾಜು ಪಾಟೀಲ, ಸಚ್ಚಿದಾನಂದ ನಾಯ್ಕ, ಖಜಾಂಚಿ ಅಮರನಾಥ ಶೆಟ್ಟಿ, ಅನ ಮೋಲ್, ಶ್ರೀರಾಮ ಮಾಂಜ್ರೇಕರ್, ಸೀಮಾ ಹಳದೀಪುರ, ಸೂರಜ್ ಗಾಂವಕರ, ಮಲ್ಲಿಕಾರ್ಜುನ್ ಹಾಜ ರಿದ್ದರು.

ಸೈನಿಂಗ್ ಸ್ಟಾರ್ ಅಸೋಸಿಯೇಶನ್‌ನ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅತಿಥಿ ಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ನಾಗರಾಜ ನಾಯಕ ಸ್ವಾಗತಿಸಿದರು. ಶೈಲೇಶ ಹಳದಿಪುರ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ-ಹಿಂದಿ ಭಾಷೆ ವಿಭಾಗ: ಸಚಿನ್ ಬಾಂದೆಕರ-1, ಅಭಿನಂದನ ಬಾಂದೇಕರ-2ನಮ್ರತಾ ಗಾಂವಕರ-3. ಕನ್ನಡ ವಿಭಾಗ: ನಾಗರಾಜ ಎನ್. ಜೆ.-1 ಗಜಾನನ ನಾಯ್ಕ-2, ಪ್ರಶಾಂತ ಶೆಟ್ಟಿ-3 ಕೊಂಕಣಿ ವಿಭಾಗ: ಜನಿತಾ ಲೊಫೀಸ್-1, ಅಮಿತಾ-2 ಸ್ಯಾಮ್‌ಸನ್ -3 ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT