ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೀನಾ ಗುಣಗಾನ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ `ಏಜೆಂಟ್ ವಿನೋದ್~ ಚಿತ್ರದ ಬಗ್ಗೆ ಸೈಫ್ ಅಲಿ ಖಾನ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಅವರ ಮಾತಿನಲ್ಲಿ ಚಿತ್ರಕ್ಕಿಂತ ಹೆಚ್ಚಾಗಿ ಕರೀನಾ ಕಪೂರ್ ಪ್ರಶಂಸೆಯೇ ತುಂಬಿಕೊಂಡಿದ್ದು ವಿಶೇಷ.

`ಕರೀನಾ ತುಂಬಾ ಚೆನ್ನಾಗಿ ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸಿದ್ದಾರೆ. ಕತೆ ಸಿದ್ಧವಾದಾಗ ಕರೀನಾಗೆ ಸ್ಟಂಟ್ ಮಾಡಲು ಅವಕಾಶ ಇರಲಿಲ್ಲ. ಚಿತ್ರ ಆರಂಭವಾದ ನಂತರ ಅವರು ಆಕ್ಷನ್‌ಗೆ ಮನಸ್ಸು ಮಾಡಿದರು. ಅದರಿಂದ ಆಕ್ಷನ್ ಸನ್ನಿವೇಶಗಳನ್ನು ಸೇರಿಸಲಾಯಿತು~ ಎಂದು ಕರೀನಾ ಸ್ಟಂಟ್‌ಗಳನ್ನು ಹೊಗಳಿರುವ ಸೈಫ್, ಆಕ್ಷನ್ ಎಂದರೆ ಮೂಗು ಮುರಿಯುವ ಅವರಿಗೆ ಅದು ಇಷ್ಟವಾಗಿದ್ದೇ ಒಂದು ಪವಾಡ ಎಂದಿದ್ದಾರೆ.
 
ಜೊತೆಗೆ ಕರೀನಾ ಸಾಹಸ ಪ್ರಧಾನ ದೃಶ್ಯಗಳಲ್ಲಿ ಉಳಿದೆಲ್ಲಾ ನಟಿಯರಿಗಿಂತ ಸುಂದರವಾಗಿ ಕಾಣುತ್ತಾರೆ ಎಂದು ಕಣ್ಣು ಮಿಟುಕಿಸಿದ್ದಾರೆ. `ದೆಹಲಿಯಲ್ಲಿ ನಡೆದ ಆಕ್ಷನ್ ಸನ್ನಿವೇಶದ ಚಿತ್ರೀಕರಣ ಸಮಯದಲ್ಲಿ ಕರೀನಾಗೆ ಸಣ್ಣ ಗಾಯವಾಯಿತು.
 
ಆದರೂ ಬಿಡದೆ ಚಿತ್ರೀಕರಣ ಮುಗಿಸಿದಳು~ ಎಂದು ಗೆಳೆತಿಯ ಬದ್ಧತೆಯನ್ನು ಪ್ರಶಂಸೆ ಮಾಡಿದ್ದಾರೆ. ಶ್ರೀರಾಮ್ ರಾಘವನ್ ನಿರ್ದೇಶನದ `ಏಜೆಂಟ್ ವಿನೋದ್~ ಚಿತ್ರಕ್ಕೆ ಸೈಫ್ ನಿರ್ಮಾಪಕ. ಮುಂಬೈ, ಮೊರಾಕ್ಕೊದಲ್ಲಿ ಚಿತ್ರೀಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT