ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ಬೃಹತ್ ರ‌್ಯಾಲಿ

Last Updated 2 ಆಗಸ್ಟ್ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು:  ಮಂಗಳೂರಿನಲ್ಲಿರುವ `ಮಾರ್ನಿಂಗ್‌ಮಿಸ್ಟ್~  ಹೋಂ ಸ್ಟೇ  ಮೇಲೆ ನಡೆದ ದಾಳಿಯನ್ನು ವಿರೋಧಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಆಗಸ್ಟ್ 4 ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಬೃಹತ್ ರ‌್ಯಾಲಿಯನ್ನು ಹಮ್ಮಿಕೊಂಡಿದೆ.

ಈ ಬಗ್ಗೆ ಗುರುವಾರ ಮಾಹಿತಿ  ನೀಡಿದ ವೇದಿಕೆಯ ಅಧ್ಯಕ್ಷ ಕೆ.ಎಲ್.ಅಶೋಕ, `ದಾಳಿಯನ್ನು ಸಂಪೂರ್ಣವಾಗಿ ಚಿತ್ರೀಕರಿಸುವ ಮೂಲಕ ಸಂಸ್ಕೃತಿ ರಕ್ಷಕರು ಎಂದು ಹೇಳಿಕೊಳ್ಳುವ ಪುಂಡರ ಕಾಮುಕತನವನ್ನು ಜನರಿಗೆ ತಿಳಿಸಿದ ಪತ್ರಕರ್ತರ ವಿರುದ್ಧ ಮೊಕದ್ದಮೆ ಹೂಡಲಾಗಿದ್ದು, ವೃತ್ತಿಧರ್ಮವನ್ನು ಪಾಲಿಸಿದ ವರದಿಗಾರರ ಮೇಲಿರುವ ಮೊಕದ್ದಮೆಯನ್ನ ಕೂಡಲೇ ಹಿಂಪಡೆಯಬೇಕು~ ಎಂದು ಆಗ್ರಹಿಸಿದರು.

ವೇದಿಕೆಯ ಎ.ಕೆ.ಸುಬ್ಬಯ್ಯ, ಸಾಹಿತಿ ಬಿ.ಟಿ.ಲಲಿತಾನಾಯಕ್ ವೇದಿಕೆಯ ಫಕೀರ್ ಮಹಮ್ಮದ್ ಕಟ್ಟಾಡಿ, ಎನ್.ವೆಂಕಟೇಶ್, ದಿನಕರ ಎಸ್.ಬೇಂಗ್ರೆ, ಸರ್ದಾರ್ ಅಹ್ಮದ್ ಖುರೇಷಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT