ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಉತ್ತೇಜಿಸುವ ‘ವಿಡಿಯೊ ಗೇಮ್ಸ್’

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲೂ ಸಾಕಷ್ಟು ಪರಿವರ್ತನೆಗಳು ಕಾಣಬರುತ್ತಿವೆ. ಇಂದಿನ ಪೀಳಿಗೆಗೆ ಆಟದೊಂದಿಗೆ ಪಾಠ ಅಥವಾ ಕಲಿಕಾ ಮನರಂಜನೆ ಅಗತ್ಯ ಮತ್ತು ಅನಿವಾರ್ಯವಾಗಿದ್ದು, ಉತ್ತಮ ಫಲಿತಾಂಶವೂ ಬರುತ್ತಿದೆ. ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಿಂದ ಈ ಅಂಶ ದೃಢಪಟ್ಟಿದೆ. ಶೈಕ್ಷಣಿಕ  ಮನಃಶಾಸ್ತ್ರ ನಿಯತಕಾಲಿಕದಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಲಿದೆ.

ಶಿಕ್ಷಣಾಧಾರಿತ ವಿಡಿಯೊ ಗೇಮ್ಸ್ ಗಳನ್ನು ಸ್ಪರ್ಧಾತ್ಮಕವಾಗಿ ಅಥವಾ ಸಹಭಾಗಿತ್ವದಲ್ಲಿ ಇನ್ನೊಬ್ಬ ಆಟಗಾರನೊಂದಿಗೆ ಆಡುವುದರಿಂದ ವಿದ್ಯಾರ್ಥಿಗಳನ್ನು ಕಲಿಕೆಯತ್ತ ಉತ್ತೇಜಿಸುತ್ತದೆ ಎಂಬುದನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ  ಸಂಸ್ಕೃತಿ, ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತ ಸ್ಟೆನ್ ಹರ್ಡ್ಟ್ ಸ್ಕೂಲ್‌ನ ಅಧ್ಯಯನಕಾರರು ತಿಳಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ಜತೆಗೂಡಿ  ಗಣಿತದ ವಿಡಿಯೊ ಗೇಮ್ ಆಡುವಾಗ  ಆಟವನ್ನು ಅನುಭವಿಸುವ ರೀತಿ ಮತ್ತು  ಕಲಿಯುವಲ್ಲಿ ತೋರುವ ಆಸಕ್ತಿಯು ಒಬ್ಬನೇ ಆಡುವಾಗ ಇರುವುದಿಲ್ಲ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಂದರೆ ಸಹಭಾಗಿತ್ವದಲ್ಲಿ ಅಥವಾ ಹೆಚ್ಚು ಜನರು ಕಲೆತು ಆಡುವುದರಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿ ಸುತ್ತದೆ.

ಗಣಿತ ಕಷ್ಟ ಎಂಬ ಮನೋಭಾವ  ಸಾಕಷ್ಟು ಮಕ್ಕಳಲ್ಲಿದೆ. ಹೀಗಾಗಿ ಫ್ಯಾಕ್ಟರ್ ರಿಯಾಕ್ಟರ್ (Facor Reactor) ಎಂಬ ವಿಡಿಯೊ ಗೇಮ್ ವಿನ್ಯಾಸಗೊಳಿಸಲಾಗಿದ್ದು, ಇದು  ಸಮಸ್ಯೆ ಗಳನ್ನು ಪರಿಹರಿಸುವ ಮತ್ತು ಕಲಿಕೆ ಯನ್ನು ನಿರ್ಣಯಿಸುವ ಮೂಲಕ ಗಣಿತ ಕೌಶಲ ಹೆಚ್ಚಿಸುತ್ತದೆ ಎನ್ನುತ್ತಾರೆ ಅಧ್ಯಯನ ತಂಡದ ಪ್ರಮುಖ ಲೇಖಕ ಪ್ರೊಫೆಸರ್ ಜಾನ್ ಪ್ಲಾಸ್.

ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಫ್ಯಾಕ್ಟರ್ ರಿಯಾಕ್ಟರ್ ವಿಡಿಯೊ ಗೇಮ್ ಅನ್ನು ಮೊದಲು ಒಬ್ಬರೇ ಆಡುವಂತೆ ಸೂಚಿಸಿ ಅವರಿಗಿರುವ ಆಸಕ್ತಿ ಮತ್ತು ಉತ್ಸಾಹವನ್ನು ಗಮನಿಸಲಾಯಿತು.

ಬಳಿಕ ಸ್ಪರ್ಧೆ ರೂಪದಲ್ಲಿ ಮತ್ತು ಸಹ ಭಾಗಿತ್ವದಲ್ಲಿ ಅದೇ ಆಟವನ್ನು ಅಡಿಸಲಾ ಯಿತು. ಆಗ ಸಹ ವಿದ್ಯಾರ್ಥಿಗಳ ಮನ ಸ್ಥಿತಿಯನ್ನು ಗಮನಿಸಲಾಯಿತು. ಈ ವೇಳೆ ಸ್ಪರ್ಧೆಗಾಗಿ ಅಥವಾ  ಸಹಭಾಗಿತ್ವ ದಲ್ಲಿ ಆಡಿದ ವಿದ್ಯಾರ್ಥಿಗಳ ಮನಸ್ಥಿತಿ ಬಹಳ ಚುರುಕಾಗಿದ್ದು, ಗೆಲುವು ಸಾಧಿ ಸುವ ನಿರ್ದಿಷ್ಟ ಗುರಿ ಇರುವುದು ಕಂಡು ಬಂದಿತು. ತರಗತಿಯಲ್ಲಿ ಉದ್ಭವಿಸುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಶೈಕ್ಷಣಿಕ ಆಟಗಳು ಸಹಾಯ ಮಾಡುತ್ತವೆ. ಒಂದು ನಿರ್ದಿಷ್ಟ ಚೌಕಟ್ಟಿ ನಲ್ಲಿ ಕಲಿಯುವುದು ಹೇಗೆ ಎಂಬುದಕ್ಕೆ ತಿಳಿಯಲು ಶೈಕ್ಷಣಿಕ ಆಟಗಳು ಉಪಯು ಕ್ತವಾಗಿವೆ ಎಂದು ಲೇಖಕ ಪೌಲ್ ಒ ಕೆಫೆ ಅಭಿಪ್ರಾಯಪಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT