ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಂಪೌಂಡ್ ನೆಲಸಮ

Last Updated 22 ಜೂನ್ 2011, 4:20 IST
ಅಕ್ಷರ ಗಾತ್ರ

ಕೊಟ್ಟೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಕಟ್ಟುತ್ತಿದ್ದ ಕಂಪೌಂಡ್ ಕಳಪೆಯಾಗಿದೆ ಎಂದು ಮಂಗಳವಾರ ಇಡೀ ಕಂಪೌಂಡ್‌ಅನ್ನು ಕೆಡವಲಾಯಿತು.

ಶಾಸಕ ಕೆ. ನೇಮಿರಾಜ್ ನಾಯ್ಕ, ಮಂಗಳವಾರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಕಂಪೌಂಡ್ ಕಳಪೆಯಿಂದ ಕೂಡಿದೆ ಎಂಬ ಶಂಕೆಯಿಂದ ತಕ್ಷಣವೇ ಜೆಸಿಬಿ ಕರೆಸಿ ಇಡೀ ಕಂಪೌಂಡ್‌ಅನ್ನು ಕೆಡವಲು ಆದೇಶಿಸಿದರು.
ಬಸ್ ನಿಲ್ದಾಣದ್ಲ್ಲಲಿ ಪ್ರಯಾಣಿಕರು ನೋಡು ನೋಡುತ್ತಿದ್ದಂತೆಯೇ ಮುಗಿಯುವ ಹಂತದಲ್ಲಿದ್ದ ಕಂಪೌಂಡ್ ನೆಲಸಮಗೊಂಡಿತು.

ಕಂಪೌಂಡ್ ನಿರ್ಮಾಣಕ್ಕೆ ಕಳಪೆ ಇಟ್ಟಿಗೆ ಬಳಸಿದ್ದಾರೆ. ಗುಣಮಟ್ಟದ ಕಾಮಗಾರಿ ಇರಲಿಲ್ಲ ಎಂಬ ಕಾರಣ ದಿಂದ ಕಂಪೌಂಡ್‌ನ್ನು ಜೆಸಿಬಿಯಿಂದ ಕೆಡವಿಸಲಾಯಿತು ಎಂದು ಶಾಸಕ ಕೆ. ನೇಮಿರಾಜ್ ಹೇಳುತ್ತಾರೆ.
ಕಂಪೌಂಡ್ ನಿರ್ಮಾಣಕ್ಕೆ ಮೊದಲು ಗುಣಮಟ್ಟದ ಕಂಪೌಂಡ್ ನಿರ್ಮಿಸಲು ಗುತ್ತಿಗೆದಾರರಿಗೆ ತಿಳಿಸಿದ್ದರೂ ಪುನಾ ಕಳಪೆ ಕಾಮಗಾರಿ ಮಾಡುತ್ತಿರುವುದನ್ನು  ಸಹಿಸಲು ಸಾಧ್ಯವಾಗದೆ ಈ ಕ್ರಮಕ್ಕೆ ಶಾಸಕರು ಮುಂದಾದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು.

`ಇದು ಕೆ.ಎಂ.ವಿ. ಪ್ರಾಜೆಕ್ಟ್ ಅವರ ಪ್ಯಾಕೇಜ್ ಕಾಮಗಾರಿ. ನಾವು ಈ ಟೆಂಡರ್‌ನ್ನು ಪೈಪೋಟಿ ಮಾಡಿ ಪಡೆದಿದ್ದೇವೆ. ನಮ್ಮದು ಕಳಪೆ ಕಾಮಗಾರಿ ಅಲ್ಲ~ ಎಂದು ಗುತ್ತಿಗೆದಾರ ಶಿವಪ್ರಸಾದ್ ಸಮರ್ಥಿಸಿಕೊಳ್ಳುತ್ತಾರೆ.

ಕಳಪೆ ಗುತ್ತಿಗೆಯಾಗಿದ್ದರೆ ಕ್ವಾಲಿಟಿ ಕಂಟ್ರೋಲರ್ ಅವರನ್ನು ಕರೆಸಿ ತನಿಖೆ ಮಾಡಿಸಬಹುದಿತ್ತ್ಲ್ಲಲ ಎಂದೂ ಅವರು  ಪ್ರಶ್ನಿಸಿದರು.

ಈ ಕಂಪೌಂಡ್ ನಿರ್ಮಾಣಕ್ಕೆ ರೂ. ಮೂರು ಲಕ್ಷ ವೆಚ್ಚ ಮಾಡಲಾಗಿದ್ದು, ಅದೆಲ್ಲ ನಷ್ಟವಾಗಿದೆ. ನಮ್ಮ ಅಂದಾಜು ಪ್ರಕಾರ ಇದೇ ಮಾದರಿಯಲ್ಲಿ ಕಂಪೌಂಡ್ ನಿರ್ಮಿಸುತ್ತೇನೆ ಎಂದು ತಿಳಿಸಿದರು.

ಈ ಪ್ಯಾಕೇಜ್‌ನಲ್ಲಿ ಈಗಾಗಲೇ ಕೊಪ್ಪಳ, ಹಡಗಲಿ ಬಸ್ ನಿಲ್ದಾಣದಲ್ಲಿ ಕಾಮಗಾರಿ ಮಾಡಲಾಗಿದೆ. ಅಲ್ಲಿ ಯಾವುದೇ ಸಮಸ್ಯೆ ಬಂದಿಲ್ಲ ಎಂದು ಅವರು ವಿವರಿಸಿದರು.

ಕಂಪೌಂಡ್ ನೆಲ ಸಮಗೊಳ್ಳುತ್ತಿದ್ದಂತೆ ನೆರೆದಿದ್ದ ಜನರು ಜೋಡಿ ರಸ್ತೆಯೂ ಕಳಪೆ ನಿರ್ಮಾಣ ಆಗಿದೆ. ಚರಂಡಿಯೂ ಅಷ್ಟೇ. ಶಾಸಕರು ತಕ್ಷಣವೇ ಈ ಕಾಮಗಾರಿಗಳ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್
ಕುರುಗೋಡು: ಸಮೀಪದ ಎಮ್ಮಿಗ ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸ್ಥಳೀಯ ಜಡೇಶ ಡಿಜಿಟಲ್ ಸ್ಟುಡಿಯೋದಲ್ಲಿ ಕಂಪ್ಯೂಟರ್ ಸೇರಿದಂತೆ 30 ಟಿ.ವಿ. ಸುಟ್ಟಿವೆ.                        

ರಾತ್ರಿ ಬೀಸಿದ ಭಾರೀ ಗಾಳಿಗೆ ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಈ ಘಟನೆಗೆ ಕಾರಣವಾಗಿದೆ. ಸುಮಾರು ರೂ 2 ಲಕ್ಷಗಳಷ್ಟು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಸರಬರಾಜು ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆಯಿಂದ ವಿದ್ಯುತ್ ಪರಿವರ್ತಕ ದುರಸ್ತಿ ಕೆಲಸ ಭರದಿಂದ ಸಾಗಿತ್ತು. ಸಂಜೆಯ ವೇಳೆಗೆ ವಿದ್ಯುತ್ ಪೂರೈಸಲಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT