ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಹಾಕುವುದನ್ನು ತಪ್ಪಿಸಿ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಾನು ಮಾಗಡಿ ರೋಡ್ ಅಗ್ರಹಾರ ವ್ಯಾಪ್ತಿಯ ಗಂಗಪ್ಪ ಗಾರ್ಡನ್ ಏರಿಯಾ ನಿವಾಸಿ. ಗಂಗಪ್ಪ ಗಾರ್ಡನ್, ಚೆಲುವಪ್ಪ ಗಾರ್ಡನ್ ಏರಿಯಾದ ಜನರು ಚೋಳೂರುಪಾಳ್ಯ ಎಂಬ ಏರಿಯಾಗೆ ಕೆಲಸ ಕಾರ್ಯದ ಮೇಲೆ ದಿನನಿತ್ಯ ಹೋಗಿಬರಲು ಒಂದು ಚಿಕ್ಕ ಬ್ರಿಡ್ಜ್ ಇದೆ.

ಈ ಬ್ರಿಡ್ಜ್ ಮೇಲೆ ಆಟೊ, ಬೈಕ್‌ಗಳು ಓಡಾಡುತ್ತದೆ. ಆದರೆ ಇಲ್ಲಿ ಒಂದು ಆಟೊ ಬಂದರೆ ಆಟೊ ಹೋಗುವತನಕ ಜನರು ಪಕ್ಕದಲ್ಲಿ ನಿಂತಿರಬೇಕಾಗುತ್ತದೆ. ಈ ಬ್ರಿಡ್ಜ್ ಸುತ್ತ-ಮುತ್ತ ವಾಸಿಸುತ್ತಿರುವ ಜನರು ಮೊದಲು ಕಸವನ್ನು ಆ ಬ್ರಿಡ್ಜ್ ಕೆಳಗಿರುವ ಮೋರಿಗೆ ಹಾಕುತ್ತಿದ್ದರು. ಆದರೆ ಬಿಬಿಎಂಪಿಯವರು ಆ ಬ್ರಿಡ್ಜ್‌ಗೆ ಕಬ್ಬಿಣದ ಜಾಲರಿ ಹಾಕಿರುವುದರಿಂದ ಜನರು ಆ ಬ್ರಿಡ್ಜ್ ಮೇಲೆಯೆ ಕಸ ಹಾಕುತ್ತಾರೆ. ಆ ಕಸದಲ್ಲಿರುವ ಕಾಯಿ ಸಿಪ್ಪೆ ತಿನ್ನಲು ಹಸುಗಳು ಬಂದು ನಿಂತಿರುತ್ತದೆ. ಇದರಿಂದ ಅಲ್ಲಿ ಓಡಾಡುವ ಜನರಿಗೆ ತುಂಬಾ ತೊಂದರೆಯಾಗಿದೆ. ಅಲ್ಲಿ ಓಡಾಡುವ ಜನರು ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ದಯವಿಟ್ಟು ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸಬೇಕು ಹಾಗೂ ಇಲ್ಲಿ ಕಸ ಹಾಕುವುದನ್ನು ತಪ್ಪಿಸಬೇಕು.

ಮುಖ್ಯವಾಗಿ ನಮ್ಮ ಏರಿಯಾ ಕೌನ್ಸಿಲರ್ ಇತ್ತ ಗಮನಹರಿಸಿ ಈ ಬ್ರಿಡ್ಜ್‌ನ್ನು ವೀಕ್ಷಿಸಿ ಇದರ ಅಗಲೀಕರಣದ ವ್ಯವಸ್ಥೆಯನ್ನು ಮಾಡಬೇಕಾಗಿ ವಿನಂತಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT