ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟ ಕೊಡುವಲ್ಲಿ ಸೊಸೆಯದೇ ಮೇಲುಗೈ

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಬೆಂಗಳೂರಿನಲ್ಲಿ ತಂದೆ- ತಾಯಂದಿರು ಮಗನಿಂದಲೇ ಹೆಚ್ಚು ಹಿಂಸೆ ಅನುಭವಿಸಿದ ಪ್ರಕರಣಗಳು ವರದಿಯಾಗಿರುವುದನ್ನು ಅಧ್ಯಯನವೊಂದು ಎತ್ತಿ ಹಿಡಿದಿದೆ.

ಇಷ್ಟೇ ಅಲ್ಲದೆ, ಈವರೆಗೆ ಸೊಸೆಗೆ ಅತ್ತೆ ಕಾಟ ಎನ್ನಲಾಗುತ್ತಿತ್ತು. ಆದರೆ ಈಚಿನ ಈ ಅಧ್ಯಯನ ಅತ್ತೆಗೇ ಸೊಸೆಯ ಕಾಟ ಎಂದು ವರದಿ ನೀಡಿದೆ.

ಹೆಲ್ಪ್‌ಏಜ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ `ಭಾರತದಲ್ಲಿ ವೃದ್ಧರ ಮೇಲಿನ ದೌರ್ಜನ್ಯ ಹಾಗೂ ಅಪರಾಧ~ ವರದಿಯಲ್ಲಿ ಇದನ್ನು ಅಂಕಿ ಅಂಶಗಳ ಮೂಲಕ ವಿವರಿಸಲಾಗಿದೆ.

ಸಾಮಾಜಿಕ- ಆರ್ಥಿಕವಾಗಿ ಕೆಳಗಿರುವ ವರ್ಗದವರ ಸಮೀಕ್ಷೆ ನಡೆಸಿರುವ ಸಂಸ್ಥೆಯು, ಶೇ 63.4ರಷ್ಟು ಸೊಸೆಯರು ಅತ್ತೆ- ಮಾವಂದಿರ ಮೇಲೆ ದೌರ್ಜನ್ಯ ನಡೆಸಿದರೆ, ಮಗನಿಂದ ದೌರ್ಜನ್ಯಕ್ಕೊಳಗಾಗುವರ ತಂದೆ -ತಾಯಿಗಳ ಪ್ರಮಾಣ ಶೇ 44ರಷ್ಟು ಎಂದು ತಿಳಿಸಿದೆ. ಕಳೆದ ವರ್ಷ ಸಂಸ್ಥೆಯು ಸಾಮಾಜಿಕ- ಆರ್ಥಿಕವಾಗಿ ಮೇಲಿರುವ ವರ್ಗದವರ ಸಮೀಕ್ಷೆ ನಡೆಸಿತ್ತು.ಶೇ.53.6ರಷ್ಟು ಗಂಡು ಮಕ್ಕಳು ತಮ್ಮ ತಂದೆ- ತಾಯಿಯರನ್ನು ನಿಂದಿಸುತ್ತಾರೆ ಎಂಬುದು ತಿಳಿದು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT