ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾ ನಿಗಮಕ್ಕೆ 220ಕೋಟಿ ಅನುದಾನ ಬಿಡುಗಡೆ

Last Updated 19 ಫೆಬ್ರುವರಿ 2012, 8:55 IST
ಅಕ್ಷರ ಗಾತ್ರ

ಶಿಗ್ಗಾವಿ: ರಾಜ್ಯ ಸರ್ಕಾರ ಕಾಡಾ ನಿಗಮವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸುಮಾರು ರೂ. 220 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಮಲಪ್ರಭಾ ಕಾಡಾ ವ್ಯಾಪ್ತಿಗೆ ಶಿಗ್ಗಾವಿ ತಾಲ್ಲೂಕನ್ನು ಸೇರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಕನಕನಬಾಡ ಗ್ರಾಮದಲ್ಲಿ ನಡೆದ ಧರ್ಮದೇವತೆ  ಇಟಗಿ ಭೀಮಾಂಬಿಕಾ ದೇವಿ ಜಾತ್ರಾ ಮಹೋತ್ಸವ, 10ನೇ ವರ್ಷದ ಪುರಾಣ ಪ್ರಾರಂಭೋತ್ಸವದ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈವರೆಗೆ ಕಾಡಾ ನಿಗಮಕ್ಕೆ ಕೇವಲ ರೂ. 11 ಕೋಟಿ ಅನುದಾನ ನೀಡಲಾಗುತ್ತಿತ್ತು. ಇದರಿಂದ ರೈತ ಸಮೂಹದ ಆಶೋತ್ತರ ಈಡೇರಿಸಲು ಸಾಧ್ಯವಿಲ್ಲ. ಹೀಗಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರ ಅದರ ಅನುದಾನ ಹೆಚ್ಚಿಸಿದೆ ಎಂದರು.

ಸಾಮೂಹಿಕ ವಿವಾಹಗಳು ರೈತರ ಆರ್ಥಿಕ ಪ್ರಬಲತೆ ಹೆಚ್ಚಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ತಾಂಡವಾಡುತ್ತಿರುವ ಜಾತಿ-ಮತಗಳ ಕಂದಕಗಳನ್ನು ದೂರ ಮಾಡಿ ಸಮಾನತೆ ಹಾಗೂ ಸಹಬಾಳ್ವೆ ಜೀವನವನ್ನು ನೀಡುತ್ತಿವೆ. ಅದರಿಂದ ಗ್ರಾಮೀಣರಲ್ಲಿ ಒಗ್ಗಟ್ಟು ಮೂಡಿಸುವ ಹೆಚ್ಚು ಜನಮಾನ್ಯತೆ ಪಡೆಯುತ್ತಿವೆ ಎಂದ ಅವರು, ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತ ವಧು-ವರರಿಗೆ ಅವಕಾಶ ನೀಡಬಾರದು ಎಂದು ಸಂಘಟಕರಲ್ಲಿ ಮನವಿ ಮಾಡಿದರು.

ಬರಲ್ಲಿರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಸುವರ್ಣ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡುವ ಜೊತೆಗೆ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಅಲ್ಲದೆ ಕನಕನ ಬಾಡ ಗ್ರಾಮದಲ್ಲಿ ಆರಂಭಿಸಿರುವ ಕನಕದಾಸರ ಅರಮನೆ ಹಾಗೂ ವಿವಿಧ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಇನ್ನೂ ಆರು ತಿಂಗಳದಲ್ಲಿ ಪೂರ್ಣಗೊಳ್ಳಲಿವೆ.
 

ಅದರ ಅಭಿವೃದ್ಧಿಯಿಂದ ಇಡೀ ದೇಶದ ಜನವೇ ಬಾಡದತ್ತ ಕಣ್ಣತೆರೆದು ನೋಡುವಂತಾ ಗಲಿದೆ ಎಂದ ಸಚಿವರು, ಸುಮಾರು 26 ಸಾವಿರ ಹೆಕ್ಟೇರ್‌ನಷ್ಟು ಭೂಮಿ ನೀರಾವರಿ ಮಾಡುವ ಜೊತೆಗೆ ರೈತನಿಗೆ ನೆರವಾಗಿದೆ. ಅದಕ್ಕೆ ಕ್ಷೇತ್ರದ ಜನತೆಯ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಮಾದೇವಪ್ಪ ಚಾಕಲಬ್ಬಿ, ಜಿಪಂ.ಸದಸ್ಯ ಶಶಿಧರ ಹೊನ್ನಣವರ, ತಾಪಂ. ಉಪಾಧ್ಯಕ್ಷೆ ಶಾಂತಮ್ಮಾ ಬೊಮ್ಮನಹಳ್ಳಿ, ತಾಪಂಸದಸ್ಯರಾದ ಉಷಾ ಬಿಳಿಕುದರಿ, ನಿಂಗಪ್ಪ ಹರಿಜನ , ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ, ಮಾಜಿ ತಾಪಂ. ಸದಸ್ಯ ಮಾಲತೇಶ ಕಳ್ಳಿಮನಿ, ವಿಜಯಾನಂದ ಹೊಸಪೇಟಿ, ಬಿ.ಬಿ.ಬಾರೀಗಿಡದ, ವಿ.ಡಿ.ರಾಯ್ಕರ, ಶೇಖಣ್ಣ ತವರಿ ಮತ್ತಿತರರು ಉಪಸ್ಥಿತರಿದ್ದರು. ಗುರನಗೌಡ್ರ ಪಾಟೀಲ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT