ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿಗೆ ಜೀವಂತ ಬೇಲಿ ಹಾಕಿ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅರಣ್ಯ ಇಲಾಖೆ ಪ್ರತಿವರ್ಷವೂ ಭಾಗಶಃ ಅರಣ್ಯ ಪ್ರದೇಶದ ಖಾಲಿ ಜಾಗದಲ್ಲಿ ಮತ್ತು ಬೀಳು ಭೂಮಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಿಸುತ್ತದೆ. ಈ ಗಿಡಗಳನ್ನು ರಕ್ಷಿಸಲು ಸುತ್ತಲೂ ಅಕೇಶಿಯಾದಂತಹ ಮರಗಳ ಕಂಬಗಳನ್ನು ಹುಗಿದು ಅದಕ್ಕೆ ಮುಳ್ಳುತಂತಿ ಬೇಲಿ ಹಾಕುತ್ತಾರೆ.

ಅಪಾರ ಹಣ ಖರ್ಚು ಮಾಡಿ ಹಾಕಲಾಗುವ ಈ ಬೇಲಿ ಹೆಚ್ಚೆಂದರೆ ನಾಲ್ಕಾರು ತಿಂಗಳುಗಳು ಮಾತ್ರ ಇರುತ್ತದೆ. ನಂತರ ಬೇಲಿಗೆ ಹಾಕಿದ ತಂತಿ ಕಳ್ಳರ ಪಾಲಾಗುತ್ತದೆ. ತಂತಿ ಬೇಲಿಯ ಬದಲು ಕತ್ತಾಳೆ, ಜಾಲಿಯಂತಹ ಸ್ವಾಭಾವಿಕ ಬೇಲಿ ಗಿಡಗಳನ್ನು ನರ್ಸರಿಗಳಲ್ಲಿ ಬೆಳೆಸಿ ಬೇಲಿಯ ಸಾಲಿನಲ್ಲಿ ನೆಡಬೇಕು.
 
ಇಂತಹ ಬೇಲಿ  ತಯಾರಾಗಲು ಎರಡು ಮೂರು ವರ್ಷ ಬೇಕಾದರೂ ಇದು ಬಹುಕಾಲ ಬಾಳುತ್ತದೆ. ಇದರಿಂದ ಅಪಾರ ಹಣ ಮತ್ತು ಸಮಯ ಉಳಿಯುತ್ತದೆ. ಇಂತಹ ಬೇಲಿ ಜೀವ ವೈವಿಧ್ಯಕ್ಕೂ ಪೂರಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT