ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಕ್ರಮಕ್ಕೆ ಆಗ್ರಹ

ಖೊಟ್ಟಿ ಪರಿಶಿಷ್ಟ ಪಂಗಡ ಪ್ರಮಾಣಪತ್ರ:
Last Updated 27 ಡಿಸೆಂಬರ್ 2012, 8:52 IST
ಅಕ್ಷರ ಗಾತ್ರ

ಹುಮನಾಬಾದ್: ಖೊಟ್ಟಿ ದಾಖಲೆ ಸೃಷ್ಟಿಸಿ, ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುತ್ತಿರುವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕ ಸಂಚಾಲಕ ಶಿವಾಜಿ ತುಕಾರಾಮ ಸಿತಾಳಗೇರಾ ನೇತೃತ್ವದಲ್ಲಿ ಪದಾಧಿಕಾರಿಗಳು ಬುಧವಾರ ಇಲ್ಲಿನ ತಹಸೀಲ್ದಾರ ಸಿ.ಲಕ್ಷ್ಮಣರಾವ ಅವರಿಗೆ ಮನವಿಪತ್ರ ಸಲ್ಲಿಸಿದರು.

ಜಿಲ್ಲೆಯಲ್ಲಿ ಕುರುಬ, ಧನಗರ, ಜಾತಿಗೆ ಸೇರಿದವರು ಗೊಂಡ ಎಂದು ಕಬ್ಬಲಿಗ, ಕೋಳಿ ಜಾತಿಗೆ ಸೇರಿದವರು ಟೋಕರಿ ಕೋಳಿ, ವಾಲ್ಮೀಕಿ ಕೋಳಿ ಎಂದು ಜಾತಿ ಬದಲಾವಣೆ ಮಾಡಿ, ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಮಕ್ಕಳನ್ನು 1ನೇ ತರಗತಿಯಿಂದ ಪ್ರವೇಶ ಪಡೆಯುವಾಗ ಕುರುಬ, ಧನಗರ ಸಮುದಾಯಕ್ಕೆ ಸೇರಿದವರು ಗೊಂಡ ಎಂದು, ಕಬ್ಬಲಿಗ, ಕೋಳಿ ಇದ್ದವರು ಟೋಕರಿ ಕೋಳಿ ಎಂದು ದಾಖಲಾತಿಯಲ್ಲಿ ಪಾಲಕರ ಹೇಳಿಕೆ ಆಧರಿಸಿ, ಜಾತಿ ಬದಲಾವಣೆ ಮಾಡಿ, ನಮೂದಿಸುತ್ತಿದ್ದಾರೆ. ಮಕ್ಕಳ ಶಾಲಾ ದಾಖಲಾತಿ ಲಗತ್ತಿಸಿ, ಸುಳ್ಳು ಪ್ರಮಾಣ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ವಿಶೇಷವಾಗಿ ಬಸವಕಲ್ಯಾಣ ತಾಲ್ಲೂಕು ಮಿರ್ಜಾಪೂರ, ಹಣಮಂತವಾಡಿ, ಘೋಗ್ಗಾ, ರಾಜೇಶ್ವರ, ಕಿಣ್ಣಿವಾಡಿ, ಕೊಹಿನೂರ, ಪರ್ತಾಪೂರ, ಹತ್ತರಗಾ(ಎಸ್), ಚಿತ್ತಕೋಟಾ, ಭಾಲ್ಕಿ ತಾಲ್ಲೂಕು ದಾಡಗಿ ಮೊದಲಾದ ಗ್ರಾಮಗಳಲ್ಲಿನ ಶಾಲೆಗಳಲ್ಲಿ ಖೊಟ್ಟಿ ಪ್ರಮಾಣಪತ್ರ ನೀಡ  ಲಾಗಿದೆ. ಆ ಕುರಿತ ದಾಖಲೆ ತಹಸೀಲ್ದಾರ ಅವರಿಗೆ ಸಲ್ಲಿಸಲಾದ ದೂರಪತ್ರ ಜೊತೆ ಲಗತ್ತಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಕುರಿತು ಅನೇಕ ಬಾರಿ ತಹಸೀಲ್ದಾರ, ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಅವರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗಲಾದರೂ ತಪ್ಪಿತಸ್ತರ ವಿರುದ್ಧ ತಿಂಗಳೊಳಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಖಾಂತರ ಹಕ್ಕು ಪ್ರಶ್ನಿಸಿ,      ಹೈಕೋರ್ಟ್‌ನಲ್ಲಿ ಖಟ್ಲೆ ಹೂಡಲಾಗುವುದು ಎಂದು ತಿಳಿಸಲಾಗಿದೆ.

ಮಹಾಸಭಾ ಬಸವಕಲ್ಯಾಣ ಅಧ್ಯಕ್ಷ ದಶರಥ ಎಂ.ಜಮಾದಾರ್, ಕಾರ್ಯದರ್ಶಿ ಬಸವರಾಜ ಸಿರಗಾಪೂರ, ಅಂಬಾರಾಯ ಬಿರಾದಾರ ಕಲಕೇರಿ, ಬಾಬುರಾವ ದಳಪತಿ, ರಮೇಶ ಕಲಕೋರಾ, ರಂಗರಾವ ಪಾಟೀಲ, ವಿಲಾಸ ಲಾಡವಂತಿಕರ್, ಬಾಬುರಾವ ಪೂಜಾರಿ, ವಿಠ್ಠಲ್ ಜಮಾದಾರ್, ಹಣಮಂತ ಸಿರಗಾಪೂರ್, ಚಂದ್ರಕಾಂತ ಕಲಖೋರಾ, ಮಹಾದೇವ ಕೊಠಾಳೆ, ದಿಲೀಪ ಜಮಾದಾರ, ನಾರಾಯಣ ಹಿಂಡೋಳೆ  ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT