ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಲ್: ಮೊಸಳೆ ಮರಿ ಪತ್ತೆ

Last Updated 14 ಜುಲೈ 2012, 5:20 IST
ಅಕ್ಷರ ಗಾತ್ರ

ಕಾರ್ಗಲ್: ಸಮೀಪದ ಜೋಗದ ಶಿರೂರು ಕೆರೆ ದಡದಲ್ಲಿ ಸುಮಾರು 1 ವರ್ಷ ಪ್ರಾಯದ ಮೊಸಳೆ ಮರಿಯೊಂದು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.

ಸುಮಾರು 3 ಅಡಿ ಉದ್ದವಿದ್ದ ಈ ಉಭಯ ವಾಸಿಯನ್ನು ಕಂಡ ಕೂಡಲೇ ದಾರಿಹೋಕರು ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ವಿಷಯ ತಿಳಿಸಿದರು.

ಸುದ್ದಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆ ಮರಿಯನ್ನು ವಶಕ್ಕೆ ಪಡೆದಾಗ ಅದಾಗಲೇ ಸತ್ತು ಹೋಗಿರುವುದಾಗಿ ಅವರು ತಿಳಿಸಿದರು.

ನಂತರ, ಸದರಿ ಮೊಸಳೆ ಮರಿಯನ್ನು ಶರಾವತಿ ಪ್ರಕೃತಿ ಶಿಬಿರಕ್ಕೆ ಹೊಯ್ದು ಮುಂದಿನ ಕ್ರಮ ಕೈಗೊಂಡರೆಂದು ಇಲಾಖಾ ಮೂಲಗಳು ತಿಳಿಸಿದೆ.

ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ  ನೀರು ಭರ್ತಿಯಾಗಿ ರೇಡಿಯಲ್ ಗೇಟ್‌ಗಳ ಮುಖಾಂತರ ಹೆಚ್ಚುವರಿ ನೀರನ್ನು ಹೊರಹಾಯಿಸುವಾಗ, ನೀರಿನ ಸೆಳೆತಕ್ಕೆ ಸಿಗುವ ಮೊಸಳೆಗಳು ಕಾರ್ಗಲ್ ಜಲಾಶಯದ ಹಿನ್ನೀರ ತಾಣಗಳಾದ ಮರುಳುಕೋರೆ ಇನ್ನಿತರ ಪ್ರದೇಶಗಳಲ್ಲಿ ಈಚೆಗೆ ಕಾಣಿಸಿಕೊಳ್ಳುತ್ತಿದ್ದವು.

ಇದರಿಂದ ಸ್ಥಳೀಯವಾಗಿ ಮರಳು ತೆಗೆಯುವವರು ಆತಂಕ ಪಟ್ಟು ಕೊಳ್ಳುತ್ತಿದ್ದರು. ಆದರೆ, ಈಗ ಶಿರೂರು ಕೆರೆಯಲ್ಲಿ ಮೊಸಳೆ ಮರಿ ಪತ್ತೆಯಾಗಿರುವುದರಿಂದ ಇಲ್ಲಿಯೂ ಭಾರೀ ಗಾತ್ರದ ಮೊಸಳೆಗಳು ವಾಸವಾಗಿರಬೇಕೆಂಬ ಊಹಾ ಪೋಹಗಳು ದೃಢಪಟ್ಟಿದೆ ಎಂದು ಅರಣ್ಯ ಇಲಾಖೆಯ ರಾಮಚಂದ್ರಪ್ಪ, ನಾರಾಯಣ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT