ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಬಿಗಳನ್ನು ಎಸ್‌ಟಿಗೆ ಸೇರಿಸಿ: ದೇಶಪಾಂಡೆ ಮನವಿ

Last Updated 17 ಫೆಬ್ರುವರಿ 2012, 10:00 IST
ಅಕ್ಷರ ಗಾತ್ರ

ಹಳಿಯಾಳ: ಕುಣಬಿ ಸಮುದಾಯ ವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸು ವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡ ಬೇಕು ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ   ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಲಿಖಿತ ಹೇಳಿಕೆ ನೀಡಿರುವ ಮಾಜಿ ಸಚಿವರು, ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕುಣಬಿ ಜನಾಂಗ. ಒಂದು ಕಾಲಕ್ಕೆ ತಮ್ಮ ಕುಲ ಹಾಗೂ ಪಂಗಡಗಳಿಗೆ ಗಿಡ ಮರಗಳ ಹೆಸರನ್ನೇ ಇಟ್ಟುಕೊಂಡು ಅವುಗಳ ಮೂಲಕವೇ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡ ಹತ್ತಾರು ಬುಡು ಕಟ್ಟುಗಳು ಇಂದಿಗೂ ಆ ಸಂಪ್ರದಾಯ ವನ್ನು ಅನುಸರಿಸುತ್ತಿದೆ.

ಮೀಸಲಿಲ್ಲದ ಕಾಡಿನಲ್ಲೂ ಒಂದು ಮರ ಕಡಿಯ ಬೇಕಾದ ಪ್ರಸಂಗ ಬಂದರೇ ಅದನ್ನು ಪೂಜಿಸಿ ಅತ್ಯಂತ ಗೌರವದಿಂದ ಮರ ಗಳನ್ನು ಕಡಿಯುತ್ತಿದ್ದ ಬುಡಕಟ್ಟು ಗಳ ಮೌಲ್ಯ ಆದರ್ಶಪ್ರಾಯ. ಕುಣಬಿ ಸಮು ದಾಯದವರು ಕುಮರಿ ಬೇಸಾಯ ಮಾಡುತ್ತಾ ಜಾಗದಿಂದ ಜಾಗಕ್ಕೆ ಸ್ಥಳಾಂತರವಾಗುತ್ತಿದ್ದರು.
 
1795ರ ಹಿಂದೆಯೇ ಪಶ್ಚಿಮ ಘಟ್ಟಗಳಲ್ಲಿ ಸುತ್ತಾಡಿ ವರದಿ ಮಾಡಿದ ಫ್ರಾನ್ಸಿನ ಬುಕಾನುನ ಪ್ರಕಾರ ಕುಣಬಿ ಗಳು ಕರ್ನಾಟಕದ ಮೂಲ ಬುಡಕಟ್ಟು ಆಗ ಉಂಟಾಗಿದ್ದ ಪ್ಲೇಗ ರೋಗದ ಕಾರಣ ಗೋವಾಕ್ಕೆ ವಲಸೆ ಹೋಗಿ ಪೊರ್ಚು ಗೀಸ್ ಕಾಲದಲ್ಲಿ ಪುನಃ ಕರ್ನಾಟಕದ ಜೋಯಿಡಾ ಭಾಗಕ್ಕೆ ವಾಪಸ್ಸಾಗಿದ್ದಾರೆಂದು ಹೇಳಿದ್ದಾರೆ.


ಅಲೆಮಾರಿಗಳಾಗಿರುವ ಇವರು ಪಶ್ಚಿಮಘಟ್ಟಗಳಲ್ಲಿ ನೆಲೆಸಿರುವುದರಿಂದ ವಿಶಿಷ್ಟವಾದ ಬದುಕಿನಲ್ಲಿ ಉಳಿಯು ತ್ತಿದ್ದಾರೆ. ಗೋವಾ ಸರ್ಕಾರ ಅವರನ್ನು ಬುಡಕಟ್ಟು ಎಂದು ಈಗಾಗಲೇ ಘೋಷಿ ಸಿದೆ. ಗೋವಾದ ಕುಣಬಿ ಯವರಿಗೆ ಹಾಗೂ ರಾಜ್ಯದ ಕುಣಬಿ ಯವರಿಗೂ ಯಾವುದೇ ವ್ಯತ್ಯಾಸವಿಲ್ಲ.

ಅತೀ ಹಿಂದು ಳಿದ ಬುಡಕಟ್ಟು ಲಕ್ಷಣ ಹೊಂದಿದ ಕುಣಬಿ ಜನರು ತಮ್ಮದೇ ಆದ ಸಂಸ್ಕೃತಿ, ಸಂಪ್ರದಾಯ, ವಾಸಿ ಸುವ ನೆಲೆಗಳು, ಅವರಿಗೂ ಕಾಡಿಗಿ ರುವ ಸಂಬಂಧಗಳು ಆಹಾರ ಸಂಗ್ರಹಣೆ, ಕುಮರಿ ಬೇಸಾಯ ದಂತಹ ಪದ್ದತಿಗಳು, ಸಮೂಹ ಜೀವನ ಕ್ರಮ, ಸಾಂಸ್ಕೃತಿಕ ವಿಶಿಷ್ಟತೆ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು.

ಸರ್ಕಾರ ದಿಂದ ಸಿಗುವ ಹಲವಾರು ಯೋಜನೆಗಳ ಸೌವಲತ್ತುಗಳಿಂದ ವಂಚಿತರಾಗಿರುತ್ತಾರೆ. ಈ ಎಲ್ಲ ಕಾರಣ ಗಳಿಂದ ಕುಣಬಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಅನಿ ವಾರ್ಯತೆ ಇದೆ ಎಂದು ಪ್ರತಿಪಾದಿ ಸಿದ್ದಾರೆ.

ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಪರಿಶಿಷ್ಟ ವರ್ಗಗಳ ಆಯೋಗಕ್ಕೆ ನಿರ್ದೇಶನ ನೀಡಿ ವರದಿ ತರಿಸಿಕೊಂಡು ಶಿಫಾರಸು ಮಾಡಬೇಕು ಎಂದು ಕೋರಿದ್ದಾರೆ.
ಸ್ಪರ್ಧೆ ಇಂದು

ಕಲಘಟಗಿ: ತಾಲ್ಲೂಕಿನ ಬಿಸರಳ್ಳಿ ಗ್ರಾಮ ದಲ್ಲಿ ಇದೇ 17ರಂದು ಬೆಳಿಗ್ಗೆ 8ಕ್ಕೆ   ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಖಾಲಿ   ಗಾಡಾ ಹೂಡಿ ಎತ್ತು  ಕೋಣಗಳಿಂದ ಓಡಿಸುವ ಸ್ಪರ್ಧೆಯನ್ನು ಏರ್ಪಡಿಸ ಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT