ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಳಿಗೆ ವಿಚಿತ್ರ ರೋಗ: ಆತಂಕ

Last Updated 13 ಜುಲೈ 2013, 11:03 IST
ಅಕ್ಷರ ಗಾತ್ರ

ಗಜೇಂದ್ರಗಡ: `ಕುರಿಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದ್ದು ಕುರಿ ಗಾರರನ್ನು ಚಿಂತೆಗೀಡು ಮಾಡಿದೆ.

ಕುರಿಗಳನ್ನು ಮೇಯಿಸಲು ಬಿಟ್ಟಿದ್ದಾಗ ಯಾವುದೇ ರೋಗ ಇರುವುದಿಲ್ಲ. ಆದರೆ, ಮೇಯ್ದು ವಾಪಸ್ ಬಂದು  ರಾತ್ರಿ ದೊಡ್ಡಿ ಸೇರಿಕೊಳ್ಳುವ ಕುರಿಗಳ ಕಾಲುಗಳಲ್ಲಿ ಬೆಳಿಗ್ಗೆ ಗಾಯ ಕಂಡುಬರುತ್ತದೆ.

ಆ ಗಾಯದಲ್ಲಿ ಹುಳುಗಳು ಇರುತ್ತವೆ. ಹುಳುಗಳ ಕಾಟದಿಂದ ಸುಸ್ತಾಗುವ ಅವುಗಳಿಗೆ ನೋವಿನಿಂದ ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ಗಂಟಲು ಮತ್ತು ನಾಲಿಗೆ ಊದಿಕೊಳ್ಳುತ್ತದೆ. ಶ್ವಾಸಕೋಶ ತೊಂದರೆ, ಭೇದಿ ಕಾಣಿಸಿಕೊಳ್ಳುತ್ತಿದೆ ಎಂದು ಕುರಿಗಾಹಿಗಳು ತಿಳಿಸಿದರು.

`ಮಳೆಗಾಲದ ದಿನಗಳಲ್ಲಿ ಕುರಿಗಳಿಗೆ ಕಾಲುಬೇನೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಕುರಿಗಳ ಕಾಲು ಗಳಲ್ಲಿನ ಗಂಭೀರ ಗಾಯಗಳಲ್ಲಿ ಹುಳು ಗಳು ಉತ್ಪತ್ತಿಯಾಗುತ್ತಿ ರುವುದು ಅಚ್ಚರಿ ಮೂಡಿಸಿದೆ.

ಸದ್ಯ ಕಾಲು ಬೇನೆ, ಗಂಟಲು ಬೇನೆ, ಜ್ವರದಿಂದ ಬಳಲುತ್ತಿರುವ ಕುರಿ, ಮೇಕೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಈ ಕಾಯಿಲೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ರೋಗ ವಾಸಿಯಾಗದಿದ್ದರೆ ಹಿರಿಯ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ' ಎಂದು ರಾಜೂರು ಪಶು ವೈದ್ಯಕೀಯ ಪರಿವೀಕ್ಷಕ  ಯು.ಆರ್.ಚನ್ನಮ್ಮನವರ ತಿಳಿಸಿದರು.

`ಕುರಿಗಾರರು ಭಯ ಪಡುವ ಅಗತ್ಯವಿಲ್ಲ. ಮಳೆಗಾಲದ ದಿನಗಳಲ್ಲಿ ಬರಬಹುದಾದ ಕಾಯಿಲೆಗಳಲ್ಲಿ ಇದು ಒಂದಾಗಿರಬಹುದು. ಈ ಕಾಯಿಲೆ ನಿವಾರಣೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಆಯಾ ಪಶು ಚಿಕಿತ್ಸಾ ಕೇಂದ್ರಗಳಿಗೆ ಸೂಚಿಸಲಾಗಿದೆ'        ಎನ್ನುತ್ತಾರೆ ತಾಲ್ಲೂಕು ಪಶು ಸಂಗೋಪನಾ ಇಲಾಖೆಯ   ಸಹಾಯಕ ನಿರ್ದೇಶಕರಾದ ರಮೇಶ ದೊಡ್ಡಮನಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT