ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಗಿರಿಯಲ್ಲಿನ ಅಂಗನವಾಡಿ `ಕೃಷ್ಣಾರ್ಪಣ'!

ಪುರಸಭೆ ಸದಸ್ಯನ ನೇತೃತ್ವದಲ್ಲೇ ನೆಲಸಮ: ಆರೋಪ
Last Updated 5 ಸೆಪ್ಟೆಂಬರ್ 2013, 6:10 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಕೃಷ್ಣಗಿರಿ ಕಾಲೊನಿಯಲ್ಲಿ ನಿರ್ಮಾಣಹಂತದಲ್ಲಿದ್ದ ಲಕ್ಷಾಂತರ ರೂಪಾಯಿ ವೆಚ್ಚದ ಅಂಗನವಾಡಿ ಕಟ್ಟಡ ದಿಢಿ ೀರ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಇಲ್ಲಿಯ ಪುರಸಭೆ ಕೆಲ ವರ್ಷಗಳ ಹಿಂದೆ ಅಂದಾಜು ರೂ 2 ಲಕ್ಷ ಬಿಡುಗಡೆ ಮಾಡಿತ್ತು. ಆದರೆ ವರ್ಷಗಳು ಕಳೆದರೂ ಕಟ್ಟಡ ಪೂರ್ಣಗೊಳ್ಳಲಿಲ್ಲ. ಸಂಬಂಧಿಸಿದ ಎಂಜಿನಿಯರ್ ಅದರತ್ತ ಗಮನಹರಿಸಲಿಲ್ಲ. ಆದರೂ ಪುರಸಭೆ ಗುತ್ತಿಗೆದಾರನಿಗೆ ಹಣ ಪಾವತಿ ಮಾಡಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

ಆದರೆ ಕೆಲ ದಿನಗಳ ಹಿಂದೆ ಅಪೂರ್ಣ ಸ್ಥಿತಿಯಲ್ಲಿದ್ದ ಈ ಕಟ್ಟಡವೂ ಸಹ ರಾತ್ರೋರಾತ್ರಿ ನೆಲಸಮಗೊಂಡಿರುವುದು ಅಲ್ಲಿನ ನಿವಾಸಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರೆ ಅವರ ಬಳಿ ಸರಿಯಾದ ಮಾಹಿತಿ ಇರಲಿಲ್ಲ. ಸರ್ಕಾರದ ಹಣ ಖರ್ಚಾದರೂ ಸ್ವಂತ ಕಟ್ಟಡ ಇಲ್ಲದೇ ಅಂಗನವಾಡಿ ಕೇಂದ್ರವನ್ನು ಬಾಡಿಗೆ ಮನೆಯಲ್ಲಿ ನಡೆಸುತ್ತಿದ್ದಾರೆ.

ಈ ವಿಷಯ ಕುರಿತಂತೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳನ್ನು ಕೇಳಿದಾಗ, ಕೆಲ ದಿನಗಳ ಹಿಂದೆ ಯಾರೋ ಅಪೂರ್ಣ ಸ್ಥಿತಿಯಲ್ಲಿದ್ದ ಕೇಂದ್ರವನ್ನು ನೆಲಸಮ ಮಾಡಿದ್ದಾರೆ ಎಂಬ ಮಾಹಿತಿ ಬಂದಿದ್ದು, ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸಂಬಂಧಿಸಿದ ಮೇಲ್ವಿಚಾರಕಿಗೆ ಸೂಚಿಸಲಾಗಿದೆ ಎಂದು ಪ್ರಭಾರ ಅಧಿಕಾರಿ ಸುಲೋಚನಾ ತಿಳಿಸಿದರು.

ಮೂಲಗಳ ಪ್ರಕಾರ ಸದರಿ ಕಟ್ಟಡದ ಪಕ್ಕದಲ್ಲೇ ಮಾರುತಿ ದೇವಸ್ಥಾನ ನಿರ್ಮಾಣಗೊಂಡಿದ್ದು ಅದರ ಮುಂಭಾಗದಲ್ಲಿದ್ದ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ. ಪುರಸಭೆಯ ಒಬ್ಬ ಸದಸ್ಯ ಕೆಲ ವ್ಯಕ್ತಿಗಳು ಸೇರಿ ನೆಲಸಮ ಮಾಡಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಕೆಲ ನಾಗಕರಿಕರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT