ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಪೂನಿಯಾ ರಾಷ್ಟ್ರೀಯ ದಾಖಲೆ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಡಿಸ್ಕಸ್ ಥ್ರೋ ಸ್ಪರ್ಧಿ ಕೃಷ್ಣಾ ಪೂನಿಯಾ ಅಮೆರಿಕದ ಹವಾಯಿಯ ಮಯೂ ದ್ವೀಪದಲ್ಲಿ ನಡೆದ ಅಲ್ಟಿಸ್ ಟ್ರ್ಯಾಕ್ ಥ್ರೋ ಡೌನ್ ಅಥ್ಲೆಟಿಕ್ಸ್ ಕೂಟದಲ್ಲಿ ನೂತನ ರಾಷ್ಟ್ರೀಯ ದಾಖಲೆ ಮಾಡಿದರು. ಸೀಮಾ ಅಂಟಿಲ್ ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಮುರಿದರು.

ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಪೂನಿಯಾ ಡಿಸ್ಕ್‌ನ್ನು 64.76 ಮೀಟರ್ ದೂರ ಎಸೆದು ರಾಷ್ಟ್ರೀಯ ದಾಖಲೆ ಜೊತೆಗೆ, ಬೆಳ್ಳಿ ಪದಕ ಗೆದ್ದುಕೊಂಡರು. ಈ ಸಾಧನೆ ಅವರ ಎರಡನೇ ಪ್ರಯತ್ನದಲ್ಲಿ ಮೂಡಿ ಬಂತು. ಸೀಮಾ ಹೆಸರಿನಲ್ಲಿದ್ದ 64.64ಮೀ. ದಾಖಲೆಯನ್ನೂ ಮೀರಿ ನಿಂತರು.

66.86 ಮೀಟರ್ ದೂರ ಡಿಸ್ಕ್ ಎಸೆದ ಅಮೆರಿಕದ ಸ್ಪೆಫಾನಿ ಬ್ರೌನ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಹರಿಯಾಣದ ಪೂನಿಯಾ ಲಂಡನ್ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ.ಮೊದಲ ಯತ್ನದಲ್ಲಿ ವಿಫಲರಾದ ಅವರು ನಂತರ ಕ್ರಮವಾಗಿ 56.96, 64.76, 62.88, 61.55 ಮತ್ತು 63.68 ಮೀಟರ್ ದೂರ ಡಿಸ್ಕ್ ಎಸೆಯುವಲ್ಲಿ ಯಶಸ್ವಿಯಾದರು.

`ಒಲಿಂಪಿಕ್ಸ್‌ನಲ್ಲಿ ಪೂನಿಯಾ 65 ಮೀಟರ್ ದೂರ ಎಸೆಯುವ ವಿಶ್ವಾಸವಿದೆ. ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ~ ಎಂದು ಪತಿ ಹಾಗೂ ಕೋಚ್ ಸಹ ಆಗಿರುವ ವೀರೇಂದರ್ ಪ್ರತಿಕ್ರಿಯಿಸಿದರು.`ನನ್ನ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಕಷ್ಟು ಸಮುಯ ಹಿಡಿಯಿತು. ಈ ಸಾಧನೆಯಿಂದ ತುಂಬಾ ಸಂತೋಷವಾಗಿದೆ.
 
ಕ್ರೀಡಾ ಸಚಿವರು ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ನನಗೆ ಉತ್ತಮ ಬೆಂಬಲ ನೀಡುತ್ತಿದೆ~ ಎಂದು ಪೂನಿಯಾ ಸಂತಸ ವ್ಯಕ್ತಪಡಿಸಿದರು. ಮೂರು ದಿನಗಳ ಹಿಂದೆಯಷ್ಟೇ ಭಾರತದ ಅಥ್ಲೀಟ್ 63.67ಮೀಟರ್ ದೂರ ಎಸೆದು ಇಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT