ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪರಾಜ್‌ಗೆ ಮೋಸ ಮಾಡಿಲ್ಲ: ಮೂರ್ತಿ

Last Updated 10 ಏಪ್ರಿಲ್ 2013, 8:16 IST
ಅಕ್ಷರ ಗಾತ್ರ

ಕಡೂರು(ಬೀರೂರು): ಕಾಂಗ್ರೆಸ್ ತನ್ನದೇ ಆದ ಆಂತರಿಕ ಪ್ರಜಾಪ್ರಭುತ್ವ ಮತ್ತು ಶಿಸ್ತನ್ನು ಹೊಂದಿದ್ದು, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಟಿಕೆಟ್ ಹಂಚಲಾಗಿದೆ ಹೊರತು ಯಾರಿಗೂ ಅನ್ಯಾಯ ಎಸಗಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಮೂರ್ತಿ ತಿಳಿಸಿದರು.

ಪಟ್ಟಣದ ಬನಶಂಕರಿ ಕಲ್ಯಾಣಮಂಟಪದಲ್ಲಿ ಮಂಗಳವಾರ ಕಡೂರು ಪಟ್ಟಣ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ಇಡೀ ಸರ್ಕಾರವೇ ಕಡೂರಿಗೆ ಬಂದು ನಿಂತು ಹೇರಳ ಆಮಿಷಗಳ ಮೂಲಕ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿತ್ತು. ಆಗ ಕೃಷ್ಣಮೂರ್ತಿ ಅುವರ ಸಹೋದರ ಕೆಂಪರಾಜ್ ಅವರಿಗೆ ಸಿದ್ದರಾಮಯ್ಯನವರ ಒತ್ತಾಯದ ಮೇಲೆಯೇ ಟಿಕೆಟ್ ನೀಡಲಾಗಿತ್ತು.ಬಳಿಕ ಜಿಲ್ಲಾ ಪಂಚಾಯಿತಿ  ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರ ಪತ್ನಿ ಸುಜಾತಾ ಅವರಿಗೆ ಯಗಟಿ ಕ್ಷೇತ್ರಕ್ಕೆ, ಸರಸ್ವತಿಪುರ ಜಿಲ್ಲಾ ಪಂಚಾಯಿತಿ ಉಪ ಚುನಾವಣೆಯಲ್ಲಿ ಶರತ್ ಕೃಷ್ಣಮೂರ್ತಿ ಅವರಿಗೆ ಟಿಕೆಟ್ ಹಂಚಿಕೆ ಮಾಡಿತ್ತು. ಹೀಗೆ ಅವರ ಕುಟುಂಬಕ್ಕೆ ಅವಕಾಶಗಳನ್ನು ನೀಡಲಾಗಿದೆ.

ಈ ಬಾರಿ ಪಕ್ಷ ತನ್ನದೇ ಆದ ಆಯಾಮಗಳನ್ನು ಗಮನಿಸಿ, ಸುಮಾರು 8 ಸಮೀಕ್ಷೆಗಳನ್ನು ಪರಿಗಣಿಸಿ ಕೆ.ಬಿ.ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಿದೆಯೇ ಹೊರತು ಕೆಂಪರಾಜ್ ಅವರಿಗೆ ಮೋಸ ಮಾಡಲು ಅಲ್ಲ. ಇಡೀ ರಾಜ್ಯದಲ್ಲಿ ಒಂದೇ ಮಾನದಂಡ ಬಳಸಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಕೆಂಪರಾಜು ಅವರ ಬಗ್ಗೆ ಪಕ್ಷಕ್ಕೆ ಅಪಾರ ಗೌರವವಿದ್ದು, ಅವರ ಮನವೊಲಿಸುವ ಪ್ರಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮಹಮದ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಆ ಸಮಯದಲ್ಲಿ ಕ್ಷೇತ್ರಕ್ಕೆ ನಮ್ಮದೇ ಆದ ಶಾಸಕರಿದ್ದರೆ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ. ಅದಕ್ಕಾಗಿ ಕೆ.ಬಿ.ಮಲ್ಲಿಕಾರ್ಜುನರನ್ನು ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಪಕ್ಷದ ಕಡೂರು ಕ್ಷೇತ್ರದ ಅಭ್ಯರ್ಥಿ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ, ಪಕ್ಷದ ಜಿಲ್ಲಾ ವಕ್ತಾರ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್,ಎಚ್.ಎನ್.ಲೋಕೇಶ್,ಬಷೀರ್‌ಸಾಬ್, ಸಾವಿತ್ರಿ ಗಂಗಣ್ಣ, ಕೆ.ಎನ್.ಬೊಮ್ಮಣ್ಣ ಮೊದಲಾದವರು ಮಾತನಾಡಿದರು. ಕಡೂರು ಬ್ಲಾಕ್‌ನ ಎಂ.ಎಚ್.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಒಡೆಯರ್, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಮೌಳಿ, ಹೂವಿನ ಗೋವಿಂದಪ್ಪ, ಕೆ.ಎಸ್.ಆನಂದ್, ಮೂರ್ತಿರಾವ್, ಜುಬೇದಾ ಬೇಗಂ, ಕೆ.ಎಚ್.ಗೋಪಾಲ್,ಕಡೂರು ಉಮೇಶ್, ಶ್ರೀನಿವಾಸಮೂರ್ತಿ, ಹಾಲಮ್ಮ,ಅರೆಕಲ್ ಕಾಂತರಾಜ್, ಬೆಂಕಿ ಶೇಖರಪ್ಪ, ಡಿ.ಲಕ್ಷ್ಮಣ್,ಕೆ.ಜಿ.ಲೋಕೇಶ್ ಮತ್ತು ಕಡುರು ಪುರಸಭೆಯ ನೂತನ ಸದಸ್ಯರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT