ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಶೇ 10 ಏರಿಕೆ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ತನ್ನ ನೌಕರರು ಮತ್ತು  ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ 10ರಷ್ಟು ಹೆಚ್ಚಳ ಮಾಡಿದೆ. ಈ ಏರಿಕೆಯು ಜುಲೈ 1ರಿಂದ ಪೂರ್ವಾನ್ವಯವಾಗಲಿದೆ.

ಸಾಲುಸಾಲು ಹಬ್ಬಗಳ ಅವಧಿ ಆರಂಭವಾಗುವ ಸಂದರ್ಭ­ದಲ್ಲೇ ಈ ಹೆಚ್ಚಳ­ವಾಗಿದೆ. ಇದರಿಂದ 50 ಲಕ್ಷ ನೌಕರರು ಮತ್ತು 30 ಲಕ್ಷ ಪಿಂಚಣಿದಾರರಿಗೆ ಅನುಕೂಲ­ವಾಗಲಿದೆ. ಪ್ರಸ್ತುತ ತುಟ್ಟಿಭ್ಯತೆಯು ಮೂಲವೇತನ ದರದ ಶೇ 80ರಷ್ಟು ಇದೆ. ಈಗ ಇದು ಶೇ 90ಕ್ಕೆ ಏರಲಿದೆ.

ಈ ನಿರ್ಧಾರದಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಎಂಟು ತಿಂಗಳ ಅವಧಿಗೆ ಬೊಕ್ಕಸದ ಮೇಲೆ ರೂ 7,253.10 ಕೋಟಿ ಹೊರೆ ಬೀಳಲಿದೆ.
ಕೇಂದ್ರದ 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಈ ಹೆಚ್ಚಳವನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರದ ತುಟ್ಟಿಭತ್ಯೆ ಇತ್ತೀಚಿನ ವರ್ಷಗಳಲ್ಲಿ ಹಲವು ಸಲ ಏರಿಕೆಯಾಗಿದ್ದರೂ, ಎರಡಂಕಿ ಪ್ರಮಾಣ ಏರಿಕೆಯಾಗುತ್ತಿರು ವುದು ಮೂರು ವರ್ಷಗಳ ನಂತರ ಇದೇ ಮೊದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT