ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಮಗ್ಗ ಉಳಿಸಲು ಪಾದಯಾತ್ರೆ

ಹೆಗ್ಗೋಡಿನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ
Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಧಾರವಾಡ: ‘ಕೈಮಗ್ಗದ ಬದಲಿಗೆ ವಿದ್ಯುತ್‌ ಮಗ್ಗಗಳನ್ನು ಅಳವಡಿಸುವ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕು ಮತ್ತು ಕೈಮಗ್ಗ ಉತ್ಪನ್ನ ಮೀಸಲಾತಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿ­ಸ­ಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಇದೇ 15ರಿಂದ ಪಾದಯಾತ್ರೆ ನಡೆಸಲಾ­ಗು­ವುದು’ ಎಂದು ಎಂದು ದೇಸಿ ಹಾಗೂ ಚರಕ ಸಂಸ್ಥೆಯ ಮುಖಂಡ, ಹಿರಿಯ ರಂಗಕರ್ಮಿ ಪ್ರಸನ್ನ ತಿಳಿಸಿದರು.

‘ಜ 15ರಂದು ಗದಗ ಜಿಲ್ಲೆಯ ಗಜೇಂದ್ರಗಡದಿಂದ ಆರಂಭವಾಗುವ ಪಾದಯಾತ್ರೆ ಗದಗ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧ ಗ್ರಾಮ­ಗಳಲ್ಲಿ ಸಂಚರಿಸಿ ಕೆರೂರು ಗ್ರಾಮದಲ್ಲಿ  28ರಂದು ಅಂತ್ಯಗೊಳ್ಳ­ಲಿದೆ. ಮೂರನೇ ಹಂತದ ಹೋರಾ­ಟದ ಅಂಗವಾಗಿ 30ರಿಂದ (ಗಾಂಧೀಜಿ ಹುತಾತ್ಮ ದಿನ) ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡಿನ ಶ್ರಮ­ಜೀವಿ ಆಶ್ರಮದಲ್ಲಿ ಅನಿರ್ದಿಷ್ಟ ಅವ­ಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿ­ದ್ದೇನೆ’ ಎಂದು ಶನಿವಾರ ಪತ್ರಿ­ಕಾ­ಗೋಷ್ಠಿ­ಯಲ್ಲಿ ಪ್ರಕಟಿಸಿದರು.

ಕೈಮಗ್ಗ ಯಾಂತ್ರೀಕರಣ ಪ್ರಕ್ರಿಯೆ ವಿರೋ­ಧಿಸಿ ಸತ್ಯಾ­ಗ್ರಹ ನಡೆ­ಯ­ಲಿದೆ. ಹತ್ತಿ ನೇಕಾರರು, ರೇಷ್ಮೆ ನೇಕಾ­ರರು, ಖಾದಿ ನೇಕಾ­ರರು ಹಾಗೂ ವಿದ್ಯುತ್ ಮಗ್ಗ­ಗಳ ಕಾರ್ಮಿ­ಕರ ಜಂಟಿ ಸತ್ಯಾಗ್ರಹ ಇದಾ­ಗಿದೆ. ಹತ್ತಿ ಬೆಳೆಗಾ­ರರು, ಕುರಿ ಸಾಕುವವರು, ರೇಷ್ಮೆ ಬೆಳೆ­ಗಾ­ರರು, ಖಾದಿ ನೂಲು ತೆಗೆಯುವ ಗ್ರಾಮೀಣ ಮಹಿಳೆಯರು, ಬಣ್ಣ ಹಾಕು­ವವರ ಪರವಾಗಿಯೂ ಧ್ವನಿ ಎತ್ತಲಿದ್ದೇವೆ.

ಕೈಮಗ್ಗ ನೇಕಾರಿಕೆ ಕ್ಷೇತ್ರಗಳಲ್ಲಿ ತಪ್ಪಾಗಿ ಅಳವಡಿಸಲಾಗಿರುವ ವಿದ್ಯುತ್ ಮಗ್ಗಗಳಿಂದಾಗಿ ಕಾರ್ಮಿಕರು ಬೀದಿ­ಪಾ­ಲಾ­ಗುವುದನ್ನು ತಪ್ಪಿಸಬೇಕು. ನನೆ­ಗುದಿಗೆ ಬಿದ್ದಿರುವ ವಿವಿಧ ಕೈಮಗ್ಗ ಯೋಜನೆ­ಗಳು ಗ್ರಾಮೀಣ ಫಲಾನು­­ಭ­­ವಿ­ಗಳನ್ನು ತಲುಪು ವಂತೆ ಮಾಡಲು ಸರ್ಕಾರಿ ವ್ಯವಸ್ಥೆಯನ್ನು ಚುರುಕು­ಗೊಳಿಸಬೇಕು’ ಎಂದು ಪ್ರಸನ್ನ ಒತ್ತಾಯಿಸಿದರು.

‘ಆಯಾ ಗ್ರಾಮ ಅಥವಾ ಪಟ್ಟಣ­ಗಳಲ್ಲಿ ನೇಕಾರರು ಸತ್ಯಾಗ್ರಹ ನಡೆಸಲಿ­ದ್ದಾರೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT