ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಬೆ ಹುಳು ಬಾಧೆ: ರೈತರಿಗೆ ಸೂಚನೆ

Last Updated 5 ಜುಲೈ 2013, 6:39 IST
ಅಕ್ಷರ ಗಾತ್ರ

ಶಿರಹಟ್ಟಿ: ತಾಲ್ಲೂಕಿನಾದ್ಯಂತ ಬಿತ್ತನೆ ಮಾಡಿರುವ ಹೆಸರು ಬೆಳೆ ಚಿಗುರುವ ಹಂತದಲ್ಲಿ ಕೊಂಬೆ ಹುಳು ಬಾಧೆ ಶುರುವಾಗಿದ್ದು, ಹೆಬ್ಬಾಳ, ವಡವಿ ಹೊಸೂರು, ಬೆಳಗಟ್ಟಿ, ಕೆರಳ್ಳಿ, ತಾರಿಕೊಪ್ಪ, ಬೆಳ್ಳಟ್ಟಿ ಗ್ರಾಮಗಳ ಪ್ರದೇಶಕ್ಕೆ ಭೇಟಿ ನೀಡಲಾಗಿ ಅಲ್ಲಲ್ಲಿ ಕೊಂಬೆ ಹುಳುವಿನ ಬಾಧೆ ಕಂಡುಬಂದಿದೆ. ಹೆಸರು ಇದೀಗ ಚಿಗುರುತ್ತಿದ್ದು, ಹೆಸರಿನ ಬಳ್ಳಿಗಳಲ್ಲಿ ಕೊಂಬೆ ಹುಳು ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಬೆಳೆಗಳ ಎಲೆಗಳನ್ನು ತಿಂದು ಹಾನಿ ಮಾಡುತ್ತವೆ. ಹುಳುಗಳು ಮುಂದಿನ ಹಂತ ತಲುಪಿದಾಗ ದೊಡ್ಡದಾಗಿ ಹೆಸರಿನ ಬೆಳೆಯ ಗಿಡವನ್ನು ಬುಡ ಸಮೇತವಾಗಿ ನಾಶ ಮಾಡುವುದರಿಂದ ಪ್ರಾರಂಭಿಕ ಹಂತದಲ್ಲಿ ನಿರ್ವಹಣೆ ಅಗತ್ಯ, ನಿರ್ವಹಣೆಯ ಕ್ರಮಗಳ್ಳಲು ಕೆಳಕಂಡ ಕೆಲವು ಸೂಚನೆಗಳನ್ನು ನೀಡಲಾಗಿದೆ.

1) ದೊಡ್ಡ ಹುಳಗಳನ್ನು ಕೈಯಿಂದ ಆರಸಿ ನಾಶ ಪಡಿಸಿಬೇಕು, 2) ಕೀಟಗಳು ಕಂಡ ತಕ್ಷಣ 4 ಗ್ರಾಂ ಕಾರಬಾರಿಲ್ 50 ಡಬ್ಲು ಪಿ ಅಥವಾ ಮಿಲಿ ಕ್ಲೋರೋಫೈರಿಸ್ 20 ಇಸಿ ಅಥವಾ 2 ಕಿನೋಲ್ ಫಾಶರ್ರ್ 25 ಇಸಿ ಪ್ರತಿ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡಬೇಕು.

3) ಕೀಟಗಳು ನಾಲ್ಕು ಅಥವಾ ಐದನೆ ಹಂತದಲ್ಲಿದ್ದಾಗ 0.3 ಮಿಲಿ ಇಂಡಾಕ್ಸಿಕಾರ್ಬ್ 14.5ಎಸ್.ಸಿ. ಅಥವಾ 0.2 ಗ್ರಾಂ ಇಮೊಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ ಅಥವಾ 0.1 ಮಿಲಿ ಸ್ಪೈನೋಸ್ಯಾಡ್ 45 ಎಸ್.ಸಿ. ಪ್ರತಿ ಲೀಟರ್‌ಗೆ ಬೆರಸಿ ಸಿಂಪರಣೆ ಮಾಡಬೇಕು. 4) ನೀರಿನ ಅಭಾವ ಇದ್ದ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ 20 ಕಿ.ಗ್ರಾಂ ನಂತೆ 1.5ರ ಕಿನೋಲ್ ಪಾಸ್ ಅಥವಾ ಶೇ 0.4 ರ ಫೆನವೆಲ್‌ರೇಟ್ ಪುಡಿಯನ್ನು ಧೂಮೀಕರಣ ಮಾಡಬೇಕು.

ಕೀಟನಾಶಕಗಳಾದ ಕ್ಲೋರೋಫೈರಿಫಾಸ್, ಕಿನೋಲ್‌ಫಾಸ್ ಫೆನವಲ್‌ರೇಟ್‌ಪುಡಿ ರೈತ ಸಂಪರ್ಕ ಕೇಂದ್ರ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರದಲ್ಲಿ ಲಭ್ಯವಿದ್ದು, ರಿಯಾಯಿತಿ ದರದಲ್ಲಿ ರೈತರು ಪಡೆದುಕೊಂಡು ಕೊಂಬೆ ಹುಳದ ಹತೋಟಿಯನ್ನು ಮಾಡಬೇಕೆಂದು ರೈತರಲ್ಲಿ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT