ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ನಮೂದಿಸಲು ಆಗ್ರಹ

Last Updated 3 ಫೆಬ್ರುವರಿ 2011, 18:55 IST
ಅಕ್ಷರ ಗಾತ್ರ

ಮಡಿಕೇರಿ: ಫೆ. 9 ರಿಂದ 28ರ ವರೆಗೆ ನಡೆಯಲಿರುವ 2011ನೇ ಸಾಲಿನ ಜನಗಣತಿ ಸಂದರ್ಭದಲ್ಲಿ ಕೊಡವ ಸಮುದಾಯದ ನಿರ್ದಿಷ್ಟ ಕುಟುಂಬದ ಹೆಸರು ಹಾಗೂ ಮಾತೃಭಾಷೆ ಕಾಲಂನಲ್ಲಿ ‘ಕೊಡವ ತಕ್ಕ್’ ಎಂದು ದಾಖಲಿಸುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಅವರನ್ನು ಭೇಟಿ ಮಾಡಿದ್ದ ನಿಯೋಗವು ವ್ಯಕ್ತಿಯ ಕಾಲಂನಲ್ಲಿ ಕೊಡವ ಸಮುದಾಯದ ಇಂತಹ ಕುಟುಂಬ (ಒಕ್ಕ)ಕ್ಕೆ ಸೇರಿದವರೆಂದು ದಾಖಲಿಸಬೇಕು. ಅಲ್ಲದೆ, ಧರ್ಮದ ಕಾಲಂನಲ್ಲಿ ‘ಕೊಡವ’ ಹಾಗೂ ಮಾತೃ ಭಾಷೆ ಕಾಲಂನಲ್ಲಿ ‘ಕೊಡವ ತಕ್ಕ್’ ಎಂದು ದಾಖಲಿಸಬೇಕು ಎಂದು ಒತ್ತಾಯಿಸಿತು.

ಜನಗಣತಿ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕು. ಜನಗಣ ತಿಯಲ್ಲಿ ‘ಕೊಡವ’ ಎಂದು ನಮೂದಿ ಸದಿದ್ದಲ್ಲಿ ಅದು ಮಾನವ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT