ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಅರಿವಿಗಾಗಿ ಮಾನವ ರಿಬ್ಬನ್

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೆಲ್ತ್‌ಕೇರ್ ಗ್ಲೋಬಲ್ (ಎಚ್‌ಸಿಜಿ) ಆಸ್ಪತ್ರೆಗಳ ಸಮೂಹವು ನಗರದಲ್ಲಿ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಾನುವಾರ ಆರು ಸಾವಿರಕ್ಕೂ ಅಧಿಕ ಜನರ ನೆರವಿನಿಂದ ಗುಲಾಬಿ ಬಣ್ಣದ ಮಾನವ ರಿಬ್ಬನ್ ನಿರ್ಮಿಸಿತ್ತು.

ಗಿನ್ನೆಸ್ ಹಾಗೂ ಲಿಮ್ಕಾ ದಾಖಲೆ ಮಾಡುವ ಉದ್ದೇಶದಿಂದ ಎಚ್‌ಸಿಜಿ ಈ ಮಾನವ ನಿರ್ಮಿತ ರಿಬ್ಬನ್ ನಿರ್ಮಿಸಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಉಚಿತ ಮ್ಯಾಮೋಗ್ರಾಮ್, ಕ್ಯಾನ್ಸರ್ ತಪಾಸಣೆ ನಡೆಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಕಾರ್ಯಕ್ರಮದ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಗಿನ್ನೆಸ್ ಸಂಸ್ಥೆಯ ಪರಿಶೀಲನೆಗೆ ಕಳುಹಿಸಿಕೊಡಲಾಗುತ್ತಿದೆ. ವಿಶ್ವ ದಾಖಲೆಗಾಗಿ ಸಲ್ಲಿಸಿರುವ ಈ ದಾಖಲೆಗಳನ್ನು ಹೆಚ್ಚುವರಿ ಎಡಿಜಿಪಿ ಓಂಪ್ರಕಾಶ್, ರಾಜ್ಯ ಮೀಸಲು ಪೊಲೀಸ್ ಪಡೆ ಹೆಚ್ಚುವರಿ ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ, ರಾಜ್ಯ ಪೊಲೀಸ್ ಕ್ರೀಡಾ ಉತ್ತೇಜನಾ ಮಂಡಳಿಯ ಕ್ರೀಡಾಧಿಕಾರಿ ಕೆ.ಎಂ.ಮಹದೇವ ಪ್ರಸಾದ್ ಮತ್ತು ಕೇಂದ್ರ ಲೆಕ್ಕ ಮಹಾಪರಿಶೋಧಕ ಕೀರ್ತಿ ತಿವಾರಿ ಪರಿಶೀಲಿಸಿ ಅನುಮೋದಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT