ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಇಂಗ್ಲೆಂಡ್ ತಂಡದ ಮೇಲುಗೈ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಅಬುಧಾಬಿ: ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ (44ಕ್ಕೆ3) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ತಂಡದವರು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಶೇಕ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಪಾಕ್ ತಂಡದವರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ 61 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

54 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಈ ತಂಡಕ್ಕೆ ಅಜರ್ ಅಲಿ (ಬ್ಯಾಟಿಂಗ್ 46) ಹಾಗೂ ಅಸಾದ್ ಶಫೀಕ್ (ಬ್ಯಾಟಿಂಗ್ 35) ಆಸರೆಯಾಗಿದ್ದಾರೆ.

ಇದಕ್ಕೂ ಮೊದಲು ಇಂಗ್ಲೆಂಡ್ 70 ರನ್‌ಗಳ ಮುನ್ನಡೆ ಪಡೆಯಿತು. ಈ ತಂಡದವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 112 ಓವರ್‌ಗಳಲ್ಲಿ 327 ರನ್ ಗಳಿಸಿದರು. ಸ್ಟುವರ್ಟ್ ಬ್ರಾಡ್ (ಔಟಾಗದೆ 58; 62 ಎಸೆತ, 6 ಬೌಂಡರಿ, 1 ಸಿಕ್ಸ್) ಈ ಮುನ್ನಡೆಗೆ ಕಾರಣರಾದರು. 

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ ಮೊದಲ ಇನಿಂಗ್ಸ್: 96.4 ಓವರ್‌ಗಳಲ್ಲಿ 257 ಹಾಗೂ 61 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 125 (ಅಜರ್ ಅಲಿ ಬ್ಯಾಟಿಂಗ್ 46, ಅಸಾದ್ ಶಫೀಕ್ ಬ್ಯಾಟಿಂಗ್ 35; ಮಾಂಟಿ ಪನೇಸರ್ 44ಕ್ಕೆ3); ಇಂಗ್ಲೆಂಡ್ ಮೊದಲ ಇನಿಂಗ್ಸ್: 112 ಓವರ್‌ಗಳಲ್ಲಿ 327 (ಸ್ಟುವರ್ಟ್ ಬ್ರಾಡ್ ಔಟಾಗದೆ 58; ಮೊಹಮ್ಮದ್ ಹಫೀಜ್ 54ಕ್ಕೆ3, ಸಯೀದ್ ಅಜ್ಮಲ್ 108ಕ್ಕೆ4, ಅಬ್ದುರ್ ರೆಹಮಾನ್ 67ಕ್ಕೆ2). 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT