ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ ನೀಡಿದೆ: ಸೋಮ್

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನಾನು ಚೆನ್ನಾಗಿ ಆಡಿದೆ. ಇದರಿಂದ ಸುಲಭ ಗೆಲುವು ದೊರೆಯಿತು. ಭಾರತಕ್ಕೆ ಮುನ್ನಡೆ ದೊರಕಿಸಿಕೊಡಲು ಸಾಧ್ಯವಾಗಿರುವುದು ಸಂತಸ ನೀಡಿದೆ' ಎಂದು ಸೋಮದೇವ್ ದೇವವರ್ಮನ್ ಪ್ರತಿಕ್ರಿಯಿಸಿದರು.

`ಇಲ್ಲಿನ ಪರಿಸ್ಥಿತಿ ನನಗೆ ನೆರವು ನೀಡಿತು. ಇದು ಕೂಡಾ ಸುಲಭ ಗೆಲುವಿಗೆ ಕಾರಣ' ಎಂದು ಇಂಡೊನೇಷ್ಯಾದ ವಿಸ್ನು ಆದಿ ನುಗ್ರೊಹೊ ವಿರುದ್ಧ ಗೆಲುವು ಪಡೆದ ಭಾರತದ ಅಗ್ರ ರ‌್ಯಾಂಕ್‌ನ ಆಟಗಾರ ನುಡಿದರು.

`ವಿಸ್ನು ಅವರನ್ನು ಈ ಮೊದಲು ಎದುರಿಸಿರಲಿಲ್ಲ. ಆದ್ದರಿಂದ ಒಬ್ಬ ಆಟಗಾರರನ್ನು ಮೊದಲ ಬಾರಿ ಎದುರಿಸುವ ಸಂದರ್ಭ ಎಚ್ಚರಿಕೆ ವಹಿಸಬೇಕು. ನಾನು ಕೂಡಾ ಆರಂಭದಲ್ಲಿ ಎದುರಾಳಿಯ ಶಕ್ತಿ ಹಾಗೂ ದೌರ್ಬಲ್ಯ ಏನೆಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸಿದೆ. ಆ ಬಳಿಕ ನೈಜ ಪ್ರದರ್ಶನ ನೀಡಿದೆ' ಎಂದರು.

ಮೊದಲ ಪಂದ್ಯದಲ್ಲಿ ಗೆಲುವು ಪಡೆದ ಯೂಕಿ ಭಾಂಬ್ರಿ ಕೂಡಾ ತಮ್ಮ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. `ಶನಿವಾರ ನಡೆಯವ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಮತ್ತು ಸನಮ್ ಸಿಂಗ್ ಗೆಲ್ಲುವ ವಿಶ್ವಾಸ ಇದೆ. ನಮ್ಮದು ಬಲಿಷ್ಠ ತಂಡ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT