ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತ ಅವಕಾಶ ಐರ‌್ಲೆಂಡ್ ಕಾಯ್ದೆ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಕರ್ನಾಟಕದ ಡಾ. ಸವಿತಾ ಹಾಲಪ್ಪನವರ ದುರಂತ ಸಾವಿನ ನಂತರ ಜಾಗತಿಕ ಮಟ್ಟದಲ್ಲಿ ಎದ್ದ ಕಾನೂನು ಬದ್ಧ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂಬ ಒತ್ತಡಕ್ಕೆ ಮಣಿದಿರುವ ಐರ‌್ಲೆಂಡ್ ಸರ್ಕಾರ, ವೈದ್ಯಕೀಯ ಸಲಹೆ ಮೇರೆಗೆ ಗರ್ಭಪಾತಕ್ಕೆ ಅವಕಾಶ ಇರುವಂತಹ ಕಾಯ್ದೆ ರಚಿಸುವುದಾಗಿ ಘೋಷಿಸಿದೆ.

ಗರ್ಭಪಾತವನ್ನು ಕ್ರಿಮಿನಲ್ ಅಪರಾಧ ಎಂಬ ವ್ಯಾಖ್ಯಾನಿಸಿರುವ ಕಾಯ್ದೆಗೆ ತಿದ್ದುಪಡಿ ತಂದು, ತಾಯಿಯು ಪ್ರಾಣಾಪಾಯದಲ್ಲಿದ್ದಾಗ ವೈದ್ಯಕೀಯ ಸಲಹೆ ಮೇರೆಗೆ ಗರ್ಭಪಾತ ನಡೆಸಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ಹೇಳಿದೆ ಎಂದು `ಟೆಲಿಗ್ರಾಫ್' ವರದಿ ಮಾಡಿದೆ.

`ಗರ್ಭಪಾತ ವಿಷಯದಲ್ಲಿ ವೈಯಕ್ತಿಕ ನಂಬಿಕೆಗಳಿವೆ. ಆದರೂ ಸರ್ಕಾರ, ಗರ್ಭಿಣಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಈ ನಿಟ್ಟಿನಲ್ಲಿ  ವಿವಾದಾತ್ಮಕವಾಗಿರುವ ಗರ್ಭಪಾತ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಬಯಸಿದೆ' ಎಂದು ಐರ‌್ಲೆಂಡ್‌ನ ಆರೋಗ್ಯ ಸಚಿವ ಡಾ. ಜೇಮ್ಸ ರಿಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT