ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗಾಂಧೀಜಿ ತತ್ವ ಇಂದಿಗೂ ಪ್ರಸ್ತುತ'

Last Updated 12 ಜನವರಿ 2013, 20:10 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧೀಜಿಯ ತತ್ವ- ಸಿದ್ಧಾಂತಗಳು ಇಂದಿಗೂ ಪ್ರಸ್ತುತ. ಇದಕ್ಕೆ ಇಂದಿಗೂ ಗಾಂಧಿಯ ಮೇಲೆ ಜನರು ಇಟ್ಟುಕೊಂಡಿರುವ ನಂಬಿಕೆಯೇ ಸಾಕ್ಷಿ ಎಂದು ಮಹಾತ್ಮ ಗಾಂಧೀಜಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಹೇಳಿದರು.

ಸಪ್ತಸಾಗರ ಪ್ರಕಾಶನವು ಶನಿವಾರ ಆಯೋಜಿಸಿದ್ದ `ಕನ್ನಡದ ಮಣ್ಣಲ್ಲಿ ಮಹಾತ್ಮನ ಜೀವನಗು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸತ್ಯ, ಅಹಿಂಸೆಯ ದಾರಿಯಲ್ಲಿ ಸಾಗಿದರೆ ಆತ್ಮವಿಶ್ವಾಸವು ಹೆಚ್ಚುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದೇಶಪ್ರೇಮದ ಜತೆಗೆ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ನಾನು ರಕ್ತಸಂಬಂಧದಿಂದ ಮಾತ್ರ ಗಾಂಧೀಜಿಯ ಮೊಮ್ಮಗಳು. ಆದರೆ, ಈ ದೇಶದ ಪ್ರಜೆಗಳೆಲ್ಲರೂ ಮಾನಸಿಕವಾಗಿ ಗಾಂಧೀಜಿಯ ಮೊಮ್ಮಕ್ಕಳಾಗಿದ್ದಾರೆ. ಹೀಗಾಗಿ ಗಾಂಧೀಜಿಯ ಮೌಲ್ಯಗಳು ಎಲ್ಲರಿಗೂ ಸೇರಿದಂಥವು ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ಗಾಂಧೀಜಿಯ ಬಗ್ಗೆ ಮಾತನಾಡುವ ಅರ್ಹತೆ ರಾಜಕಾರಣಿಗಳಿಗಿಲ್ಲ. ಗಾಂಧೀಜಿಯವರ ತತ್ವ ಆದರ್ಶಗಳಿಗೆ ವಿರುದ್ಧವಾಗಿ ಇಂದಿನ ಸಮಾಜ ಸಾಗುತ್ತಿದೆ ಎಂದು ಅವರು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT