ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಮಾ ಕಿರಣದಿಂದ ಕೋಟಿಸೂರ್ಯ ಪ್ರಕಾಶ!

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಕೋಟಿ ಕೋಟಿ ಸೂರ್ಯ ಪ್ರಕಾಶ! ಹೌದು, ಇದೇ ಮೊದಲ ಬಾರಿಗೆ ಸಂಶೋಧಕರು ಸೂರ್ಯನಿಗಿಂತ ಶತಕೋಟಿ ಪಟ್ಟು ತೀಕ್ಷ್ಣವಾದ ಗಾಮಾ ಕಿರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯುದಾವಿಷ್ಟಗೊಳಿಸಿದ ಅನಿಲದ ಮೇಲೆ ಅತಿ ಅಲ್ಪಾವಧಿಗೆ ಲೇಸರ್ ಗುಚ್ಛಗಳನ್ನು ಹಾಯಿಸಿದಾಗ ಈ ತೀಕ್ಷ್ಣ ಕಿರಣಗಳು ಸೃಷ್ಟಿಯಾಗುತ್ತವೆ. 20 ಸೆಂ.ಮೀ. ಸೀಸ ಅಥವಾ 1.5 ಮೀಟರ್ ದಪ್ಪನೆಯ ಕಾಂಕ್ರೀಟನ್ನೂ ಈ ಕಿರಣಗಳು ನಿರಾಯಾಸವಾಗಿ ಛೇದಿಸಿ ಮುಂದೆ ಸಾಗುತ್ತವೆ ಎಂದು ಸ್ಕಾಟ್ಲೆಂಡಿನ ಸಟ್ಯೆಾಥ್‌ಕ್ಲೈಡ್ ವಿಶ್ವವಿದ್ಯಾಲಯದ ಭೌತ ವಿಜ್ಞಾನಿಗಳು ವಿವರಿಸಿದ್ದಾರೆ.

ರೇಡಿಯೋಥೆರಪಿ, ರೇಡಿಯೊ ಸಮಸ್ಥಾನಿಗಳ (ರೇಡಿಯೊ ಐಸೊಟೊಪ್) ತಯಾರಿಕೆ, ದೇಹದೊಳಗಿನ ವಿವಿಧ ಅಂಗಗಳ ಚಿತ್ರಗಳನ್ನು ತೆಗೆಯಲು ಇದರಿಂದ ಬಹಳ ಅನುಕೂಲವಾಗುತ್ತದೆ ಎಂಬುದು ತಜ್ಞರ ಆಶಾವಾದ.ಅಷ್ಟೇ ಅಲ್ಲ, ಪರಮಾಣು ತ್ಯಾಜ್ಯದ ಸುರಕ್ಷತೆಯ ಮೇಲೆ ನಿಗಾ ಇಡಲು ಕೂಡ ಇದು ಸಹಕಾರಿಯಾಗಬಲ್ಲದು; ಪ್ರಯೋಗ ಶಾಲೆಗಳಲ್ಲಿ ಪರಮಾಣು ಬೀಜಕೇಂದ್ರದ ಅಧ್ಯಯನದ ವೇಳೆ ಕೂಡ ಇದು ಬಳಕೆಗೆ ಪ್ರಶಸ್ತವಾಗಿರುತ್ತದೆ ಎಂದು  ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT