ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್: ಮುಂದುವರಿದ ರಾಮ್ಸೆ ಪ್ರಾಬಲ್ಯ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭದಿಂದಲೂ ನಿಖರ ಪ್ರದರ್ಶನ ನೀಡುತ್ತಿರುವ ಸ್ಕಾಟ್ಲೆಂಡ್‌ನ ರಿಚೀ ರಾಮ್ಸೆ ಅವರ ಪ್ರದರ್ಶನ ದಿನದಿಂದ ದಿನಕ್ಕೆ ಉತ್ತಮವಾಗುತ್ತದೆ. ಈ ಪರಿಣಾಮ ಅವರು ಇಲ್ಲಿ ನಡೆಯುತ್ತಿರುವ `ಹೀರೊ ಇಂಡಿಯನ್ ಓಪನ್~ ಗಾಲ್ಫ್ ಟೂರ್ನಿಯ ಮೂರನೇ ಸುತ್ತಿನ ಬಳಿಕವೂ ಅಗ್ರಸ್ಥಾನದಲ್ಲಿದ್ದಾರೆ.

ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಶನಿವಾರ ಮೂರನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ರಾಮ್ಸೆ 70 ಅವಕಾಶಗಳನ್ನು ತಗೆದುಕೊಂಡರು. ಇದರೊಂದಿಗೆ ಅವರು ಒಟ್ಟು  202 ಸ್ಕೋರ್‌ನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಮೊದಲು ಹಾಗೂ ಎರಡನೇ ಸುತ್ತಿನ ಸ್ಪರ್ಧೆಗಳಲ್ಲಿ ತಲಾ 66 ಸ್ಟ್ರೋಕ್‌ಗಳನ್ನು ಬಳಸಿಕೊಂಡಿದ್ದ ರಾಮ್ಸೆ ಎರಡು ಸುತ್ತಿನ ಅಂತ್ಯಕ್ಕೆ ಒಟ್ಟು 132 ಸ್ಕೋರು ಗಳಿಸಿದ್ದರು.

ಒಟ್ಟು 135 ಸ್ಕೋರುಗಳೊಂದಿಗೆ ಎರಡನೇ ಸುತ್ತಿನ ಅಂತ್ಯಕ್ಕೆ ಜಂಟಿ ಎರಡನೇ ಸ್ಥಾನದಲ್ಲಿದ್ದ ಫಿನ್ಲೆಂಡ್‌ನ ಜಾಕೊ ಮಕಿ ಟಾಲೊ ಮೂರನೇ ದಿನ 68 ಅವಕಾಶಗಳನ್ನು ಬಳಸಿಕೊಂಡರು. ಇದರೊಂದಿಗೆ ಒಟ್ಟು 203 ಸ್ಕೋರು ಕಲೆ ಹಾಕಿ ಎರಡನೇ ಸ್ಥಾನಕ್ಕೇರಿದರು.

ಕಪೂರ್‌ಗೆ ಒಂಬತ್ತನೇ ಸ್ಥಾನ: ನಿಧಾನಗತಿಯಲ್ಲಿ ಆರಂಭ ಪಡೆದ ಭಾರತದ ಶಿವ ಕಪೂರ್ ಮೂರನೇ ಸುತ್ತಿನ ಅಂತ್ಯಕ್ಕೆ ಒಂಬತ್ತನೇ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT