ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಪಟ ಹಾರಿಸಿದ ದಿಲೀಪ್ ಕುಮಾರ್

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಸಂಕ್ರಾಂತಿ ದಿನ ಗಾಳಿಪಟ ಹಾರಿಸುವುದು ಚಿಣ್ಣರಿಗಷ್ಟೇ ಸಂಭ್ರಮವಲ್ಲ. ಬಾಲಿವುಡ್‌ನಲ್ಲಿ ದಂತಕತೆಯಾಗಿರುವ ನಟ ದಿಲೀಪ್ ಕುಮಾರ್ ಸಹ ಗಾಳಿಪಟ ಅಂದರೆ ಹಿರಿ, ಹಿರಿ ಹಿಗ್ಗುತ್ತಾರೆ.

ಮುಂಬೈನಲ್ಲಿ ಆಕಾಶವೇ ಕಾಣದಂತೆ ಕಟ್ಟಡಗಳು ಎದ್ದಿದ್ದರೂ 89 ವರ್ಷದ ಈ ಹಿರಿಯ ನಟ ಉತ್ಸಾಹ ಕಳೆದುಕೊಂಡಿಲ್ಲ.

ಎಲ್ಲೆಲ್ಲಿಂದಲೋ ಸಂಗ್ರಹಿಸಿರುವ ಗಾಳಿಪಟಗಳ ಪೆಟ್ಟಿಗೆಯನ್ನು ಭಾನುವಾರ ತೆರೆದೇಬಿಟ್ಟರು. ಟೆರೇಸ್‌ಗೆ ಹೋಗಿ ಗಾಳಿಪಟ ಹಾರಿಸಿದರು.

ಗಾಳಿಪಟ ಯಶಸ್ವಿಯಾಗಿ ಹಾರಿಸಿದ ನಂತರ, ಅವು ಆಗಸದಲ್ಲಿ ಏರುವುದನ್ನು ನೋಡುವುದೇ ದೊಡ್ಡ ಥ್ರಿಲ್ ಎಂದು ಟ್ವಿಟರ್‌ನಲ್ಲಿ ಅವರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT